ಫತೇವುಲ್ಲಾಗೆ ಬೆಂಬಲ ನೀಡುವ ದೇಶ ಟರ್ಕಿಯ ವೈರಿ: ಪ್ರಧಾನಿ
Update: 2016-07-16 22:52 IST
ಅಂಕಾರ, ಜು. 16: ಟರ್ಕಿಯ ಕ್ಷಿಪ್ರಕ್ರಾಂತಿಯ ರೂವಾರಿ ಎಂದು ಶಂಕಿಸಲಾಗಿರುವ ಮುಸ್ಲಿಮ್ ಧರ್ಮಗುರು ಫತೇವುಲ್ಲಾ ಗುಲನ್‌ಗೆ ಬೆಂಬಲ ನೀಡುವ ಯಾವುದೇ ದೇಶ ಟರ್ಕಿಯ ಮಿತ್ರನಾಗಿರುವುದು ಸಾಧ್ಯವಿಲ್ಲ ಹಾಗೂ ಅಂಥ ದೇಶ ಟರ್ಕಿಯ ವಿರುದ್ಧ ಯುದ್ಧ ಘೋಷಿಸಿದೆ ಎಂಬುದಾಗಿ ಪರಿಗಣಿಸಲಾಗುವುದು ಎಂದು ಟರ್ಕಿ ಪ್ರಧಾನಿ ಬಿನಾಲಿ ಯಿಲ್ಡಿರಿಮ್ ಶನಿವಾರ ಎಚ್ಚರಿಸಿದ್ದಾರೆ.
ಅಮೆರಿಕದಲ್ಲಿ ಹಲವು ವರ್ಷಗಳಿಂದ ಸ್ವಘೋಷಿತ ದೇಶಭ್ರಷ್ಟನಾಗಿ ಬದುಕುತ್ತಿರುವ ಗುಲನ್‌ರ ಹಿಂಬಾಲಕರು ಶುಕ್ರವಾರ ಸೇನೆಯ ಒಂದು ಬಣ ನಡೆಸಿದ ವಿಫಲ ಕ್ರಾಂತಿಯ ಹಿಂದಿದ್ದಾರೆ ಎಂದು ಸರಕಾರ ಹೇಳಿದೆ.
ಸರಕಾರವನ್ನು ಕಿತ್ತೊಗೆಯುವುದಕ್ಕಾಗಿ ನ್ಯಾಯಾಂಗ, ಶೈಕ್ಷಣಿಕ ವ್ಯವಸ್ಥೆ, ಮಾಧ್ಯಮ ಮತ್ತು ಸೇನೆಯಲ್ಲಿ ಸಮಾನಾಂತರ ವ್ಯವಸ್ಥೆಯೊಂದನ್ನು ನಿರ್ಮಿಸಲು ಗುಲನ್ ಪ್ರಯತ್ನಿಸುತ್ತಿದ್ದಾರೆ ಎಂದು ಅವರ ಸರಕಾರ ಆರೋಪಿಸಿದೆ.