ಡಬ್ಲುಬಿಒ ಏಷ್ಯಾ-ಪೆಸಿಫಿಕ್ ಪ್ರಶಸ್ತಿ ಮುಹಮ್ಮದ್ ಅಲಿಗೆ ಅರ್ಪಿಸಿದ ವಿಜೇಂದರ್ ಸಿಂಗ್

Update: 2016-07-17 04:57 GMT

ಹೊಸದಿಲ್ಲಿ, ಜು.17: ಆಸ್ಟೇಲಿಯದ ಕೆರ್ರಿ ಹೋಪ್‌ರನ್ನು ಮಣಿಸಿ ಡಬ್ಲುಬಿಒ ಏಷ್ಯಾ-ಪೆಸಿಫಿಕ್ ಪ್ರಶಸ್ತಿಯನ್ನು ಜಯಿಸಿರುವ ವಿಜೇಂದರ್ ಸಿಂಗ್ ಐತಿಹಾಸಿಕ ಸಾಧನೆ ಮಾಡಿದ್ದು, ತನ್ನ ಈ ಸಾಧನೆಯನ್ನು ಜೂನ್‌ನಲ್ಲಿ ವಿಧಿವಶರಾದ ಹೇವಿವೇಟ್ ಬಾಕ್ಸಿಂಗ್ ದಂತಕತೆ ಮುಹಮ್ಮದ್ ಅಲಿಗೆ ಸಮರ್ಪಿಸಿದರು.

ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟಿರುವ ಮೊದಲ ಬಾಕ್ಸರ್ ಆಗಿರುವ ವಿಜೇಂದರ್ 10 ಸುತ್ತಿನ ವೃತ್ತಿಪರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಹೋಪ್‌ರನ್ನು 296-274 ಅಂತರದಿಂದ ಮಣಿಸಿ ಡಬ್ಲುಬಿಒ ಏಷ್ಯಾ-ಪೆಸಿಫಿಕ್ ಸೂಪರ್ ಮಿಡ್ಲ್‌ವೇಟ್ ಪ್ರಶಸ್ತಿ ಜಯಿಸಿದ್ದಾರೆ.

 ‘‘ಜೂನ್‌ನಲ್ಲಿ ನಮ್ಮನ್ನು ಅಗಲಿರುವ ಮುಹಮ್ಮದ್ ಅಲಿಗೆ ಈ ಪ್ರಶಸ್ತಿಯನ್ನು ಅರ್ಪಿಸಲು ಬಯಸುವೆ. ಅವರು ಕ್ರೀಡೆಯ ದಂತಕತೆ. ನನಗೆ ಬೆಂಬಲ ನೀಡಿರುವ ದೇಶದ ಜನತೆಗೂ ಕೃತಜ್ಞತೆ ಸಲ್ಲಿಸುವೆ’’ ಎಂದು 10 ಸುತ್ತಿನ ಪಂದ್ಯ ಜಯಿಸಿದ ಬಳಿಕ ಸುದ್ದಿಗಾರರಿಗೆ ವಿಜೇಂದರ್ ತಿಳಿಸಿದ್ದಾರೆ.

 ಹೋಪ್ ವಿರುದ್ಧ ಕಠಿಣ ಸ್ಪರ್ಧೆಯನ್ನು ಜಯಿಸಿದ ವಿಜೇಂದರ್, ‘‘ಭಾರತದ ಜನತೆಗೆ ಧನ್ಯವಾದ. ಅವರೇ ನನ್ನ ಗೆಲುವನ್ನು ಸಾಧ್ಯವಾಗಿಸಿರುವುದು. ನನ್ನ ಬಾಕ್ಸಿಂಗ್‌ಗೆ ಇಷ್ಟೊಂದು ಜನರು ಬರುತ್ತಾರೆಂದು ನಿರೀಕ್ಷಿಸಿರಲಿಲ್ಲ. ನನ್ನ ಬಾಕ್ಸಿಂಗ್ ಫೈಟ್ ವೀಕ್ವಿಸಲು ಬಂದ ಎಲ್ಲ ಬಾಲಿವುಡ್ ಸ್ಟಾರ್‌ಗಳು, ರಾಜಕಾರಣಿಗಳು ಹಾಗೂ ಯುವಕರಿಗೆ ಕೃತಜ್ಞತೆಗಳು’’ ಎಂದು ವಿಜೇಂದರ್ ನುಡಿದರು.

..........

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News