ಸೌರವ್ ಘೋಷಾಲ್ ಐತಿಹಾಸಿಕ ಸಾಧನೆ

Update: 2016-07-18 18:11 GMT

ಮುಂಬೈ, ಜು.18: ಹಾಲಿ ಚಾಂಪಿಯನ್ ಹಾಗೂ ಅಗ್ರ ಶ್ರೇಯಾಂಕದ ಸೌರವ್ ಘೋಷಾಲ್ 73ನೆ ಆವೃತ್ತಿಯ ಹಿರಿಯರ ರಾಷ್ಟ್ರೀಯ ಸ್ಕ್ವಾಷ್ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್ ನಲ್ಲಿ ಐತಿಹಾಸಿಕ ಸಾಧನೆ ಮಾಡಿದರು.

ನಾಲ್ಕನೆ ಶ್ರೇಯಾಂಕದ ಹರೀಂದರ್ ಪಾಲ್ ಸಿಂಗ್ ಸಂಧು ರನ್ನು ವೀರೋಚಿವಾಗಿ ಮಣಿಸಿದ ಸೌರವ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡರು. ಮಾತ್ರವಲ್ಲ 11ನೆ ಬಾರಿ ಪ್ರಶಸ್ತಿಯನ್ನು ಜಯಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದರು.

ರವಿವಾರ ಇಲ್ಲಿ 88 ನಿಮಿಷಗಳ ಕಾಲ ನಡೆದ ಫೈನಲ್ ಪಂದ್ಯದಲ್ಲಿ ಘೋಷಾಲ್ ಅವರು ಸಂಧು ಅವರನ್ನು 11-7, 7-11, 3-11, 11-8, 14-12 ಗೇಮ್‌ಗಳ ಅಂತರದಿಂದ ಮಣಿಸಿದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್ ಜೋಶ್ನಾ ಚಿನ್ನಪ್ಪರನ್ನು ಮಣಿಸಿದ ದೀಪಿಕಾ ಪಲ್ಲಿಕಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಐದು ವರ್ಷಗಳ ಅಂತರದ ಬಳಿಕ ರಾಷ್ಟ್ರೀಯ ಟೂರ್ನಿಯಲ್ಲಿ ಆಡಿದ ವಿಶ್ವದ ನಂ.9ನೆ ಆಟಗಾರ್ತಿ ದೀಪಿಕಾ ಬದ್ಧ ಎದುರಾಳಿ ಜೋಶ್ನಾರನ್ನು 43 ನಿಮಿಷಗಳ ಹೋರಾಟದಲ್ಲಿ 4-11, 11-6, 11-2, 11-8 ಅಂತರದಿಂದ ಸೋಲಿಸಿದ್ದಾರೆ.

ನಾವು ಐದು ರಾಷ್ಟ್ರೀಯ ಫೈನಲ್‌ನಲ್ಲಿ ಆಡಿದ್ದೇವೆ. ಎಲ್ಲ ಪಂದ್ಯಗಳಲ್ಲೂ ಉತ್ತಮ ಹೋರಾಟ ನೀಡಿದ್ದೇವೆ. ನಮ್ಮಿಬ್ಬರಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಹರೀಂದರ್‌ಪಾಲ್ ವಿರುದ್ಧ ಆಡುವುದು ತುಂಬಾ ಕಷ್ಟಕರ. ನಾನು ಆಡಿರುವ ಅತ್ಯುತ್ತಮ ಪಂದ್ಯ ಇದಾಗಿದೆ ಎಂದು ಘೋಷಾಲ್ ಹೇಳಿದ್ಧಾರೆ.

ನಾನು ಯಾವುದೇ ಗೇಮ್‌ಪ್ಲಾನ್ ಹಾಕಿಕೊಂಡಿರಲಿಲ್ಲ. ಸಾಧ್ಯವಾದಷ್ಟು ಹೆಚ್ಚು ಅಂಕ ಗಳಿಸುವತ್ತ ಚಿತ್ತವಿರಿಸಿದ್ದೇನೆ. ನಾವಿಬ್ಬರೂ ಈ ಹಿಂದೆ ಅತ್ಯಂತ ಪೈಪೋಟಿಯಿಂದ ಕೂಡಿದ್ದ ಪಂದ್ಯವನ್ನು ಆಡಿದ್ದೇವೆ. ನಮ್ಮಿಬ್ಬರು ಆಟದ ಶೈಲಿಯಲ್ಲಿ ಸಾಮ್ಯತೆಯಿದೆ. ನಾವಿಬ್ಬರೂ ಇನ್ನೆರಡು ವರ್ಷಗಳಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಉಳಿಸಿಕೊಳ್ಳಲು ಎದುರು ನೋಡುತ್ತಿರುವೆ. ನಾವು ಈಗಾಗಲೇ ಆ ನಿಟ್ಟಿನಲ್ಲಿ ತರಬೇತಿ ನಡೆಸಲಿದ್ದೇವೆ ಎಂದು ದೀಪಿಕಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News