×
Ad

ಒಲಿಂಪಿಕ್ಸ್: ಚೀನಾದ 416 ಅಥ್ಲೀಟ್‌ಗಳು ಸ್ಪರ್ಧಾಕಣಕ್ಕೆ

Update: 2016-07-18 23:44 IST

ಶಾಂೈ, ಜು.18: ಮುಂದಿನ ತಿಂಗಳು ಆರಂಭವಾಗಲಿರುವ ರಿಯೋ ಒಲಿಂಪಿಕ್ಸ್‌ಗೆ 416 ಅಥ್ಲೀಟ್‌ಗಳನ್ನು ಕಳುಹಿಸಿಕೊಡಲು ಚೀನಾ ನಿರ್ಧರಿಸಿದೆ. ಒಲಿಂಪಿಕ್ ಇತಿಹಾಸದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಅಥ್ಲೀಟ್‌ಗಳನ್ನು ಕಳುಹಿಸಿಕೊಡಲಿರುವ ಚೀನಾ, ಒಲಿಂಪಿಕ್ಸ್‌ನಲ್ಲಿ ಈ ಬಾರಿಯೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.

ನಾಲ್ಕು ವರ್ಷಗಳ ಹಿಂದೆ ನಡೆದ ಒಲಿಂಪಿಕ್ಸ್‌ನಲ್ಲಿ ಪದಕ ಪಟ್ಟಿಯಲ್ಲಿ ಚೀನಾ ಎರಡನೆ ಸ್ಥಾನ ಪಡೆದಿತ್ತು. ಅಮೆರಿಕ ಅಗ್ರ ಸ್ಥಾನ ಪಡೆದಿತ್ತು.

ಸೋಮವಾರ ಬೀಜಿಂಗ್‌ನಲ್ಲಿ ನಡೆದ ತಂಡಗಳ ಅನಾವರಣ ಕಾರ್ಯಕ್ರಮದಲ್ಲಿ 256 ಮಹಿಳೆಯರು ಹಾಗೂ 160 ಪುರುಷ ಅಥ್ಲೀಟ್‌ಗಳನ್ನು ಕಳುಹಿಸಿಕೊಡಲು ನಿರ್ಧರಿಸಲಾಯಿತು. 29 ವಿದೇಶಿ ಕೋಚ್‌ಗಳ ಸಹಿತ ಒಟ್ಟು 711 ಸದಸ್ಯರನ್ನು ಒಳಗೊಂಡ ನಿಯೋಗ ಒಲಿಂಪಿಕ್ಸ್‌ಗೆ ತೆರಳಲಿದೆ.

14ರ ಹರೆಯದ ಯಾನ್ಹಾನ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಕಿರಿಯ ಅಥ್ಲೀಟ್. ಯಾನ್ಹಾನ್ ಮಹಿಳೆಯರ 200 ಮೀ. ಫ್ರೀಸ್ಟೈಲ್ ಹಾಗೂ 4-200 ಮೀ. ಫ್ರೀಸ್ಟೈಲ್ ರಿಲೇ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

39ರ ಹರೆಯದ ಶೂಟಿಂಗ್ ಚಾಂಪಿಯನ್ ಚೆನ್ ಯಿಂಗ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಚೀನಾದ ಅತ್ಯಂತ ಹಿರಿಯ ಅಥ್ಲೀಟ್. ಐದು ಬಾರಿಯ ಒಲಿಂಪಿಕ್ ಚಾಂಪಿಯನ್ ಹಾಗೂ ಜಿಮ್ನಾಸ್ಟಿಕ್ ಪಟು ಝೌ ಕೆಯ್ ಹಾಗೂ ಯುವ ಜಿಮ್ನಾಸ್ಟಿಕ್ ಪಟು ಲಿಯು ಟಿಂಗ್‌ಟಿಂಗ್ ಒಲಿಂಪಿಕ್ಸ್ ತಂಡದಿಂದ ಹೊರಗುಳಿದ ಪ್ರಮುಖ ಅಥ್ಲೀಟ್‌ಗಳು. ಈ ಇಬ್ಬರು ಗಾಯದ ಸಮಸ್ಯೆಯಿಂದಾಗಿ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News