ಪ್ರಯಾಣಿಕರಿಗೆ ಹಲ್ಲೆಗೈದಾತನನ್ನು ಕೊಂದ ಪೊಲೀಸರು
Update: 2016-07-19 23:53 IST
ಬರ್ಲಿನ್ (ಜರ್ಮನಿ), ಜು. 19: ಕೊಡಲಿ ಮತ್ತು ಚೂರಿಯಿಂದ ರೈಲು ಪ್ರಯಾಣಿಕರ ಮೇಲೆ ಆಕ್ರಮಣಗೈದ ಆರೋಪದಲ್ಲಿ ಜರ್ಮನಿ ಪೊಲೀಸರು 17 ವರ್ಷದ ಅಫ್ಘಾನ್ ನಿರಾಶ್ರಿತನೊಬ್ಬನನ್ನು ಸೋಮವಾರ ಗುಂಡು ಹಾರಿಸಿ ಕೊಂದಿದ್ದಾರೆ.
ದಕ್ಷಿಣದ ನಗರ ವೂರ್ಝ್‌ಬರ್ಗ್ ಸಮೀಪ ಸ್ಥಳೀಯ ರೈಲಿನಲ್ಲಿ ನಡೆದ ದಾಳಿಯಲ್ಲಿ ನಾಲ್ಕು ಮಂದಿ ಗಂಭೀರ ಗಾಯಗೊಂಡಿದ್ದಾರೆ.