×
Ad

ಸೇನಾ ದಂಗೆ: 85 ಜನರಲ್‌ಗಳ ಬಂಧನ

Update: 2016-07-19 23:53 IST

ಅಂಕಾರ (ಟರ್ಕಿ), ಜು. 19: ವಿಫಲ ಸೇನಾ ದಂಗೆಯಲ್ಲಿ ಶಾಮೀಲಾದ ಆರೋಪದಲ್ಲಿ 85 ಸೇನಾ ಜನರಲ್‌ಗಳು ಮತ್ತು ಅಡ್ಮಿರಲ್‌ಗಳ ವಿಚಾರಣೆಯನ್ನು ಬಾಕಿಯಿರಿಸಿ ಅವರನ್ನು ಬಂಧನದಲ್ಲಿಡುವಂತೆ ನ್ಯಾಯಾಲಯಗಳು ಆದೇಶ ಹೊರಡಿಸಿವೆ ಎಂದು ಟರ್ಕಿಯ ಸರಕಾರಿ ಒಡೆತನದ ವಾರ್ತಾ ಸಂಸ್ಥೆ ಹೇಳಿದೆ.

ಇತರ ಹಲವಾರು ಮಂದಿಯನ್ನು ಈಗಲೂ ಪ್ರಶ್ನಿಸಲಾಗುತ್ತಿದೆ.

ಜುಲೈ 15ರ ವಿಫಲ ಸೇನಾ ದಂಗೆಯ ರೂವಾರಿ ಎಂದು ಹೇಳಲಾದ ಮಾಜಿ ವಾಯುಪಡೆ ಕಮಾಂಡರ್ ಜನರಲ್ ಅಕಿನ್ ಓಝ್‌ಟರ್ಕ್ ಮತ್ತು ಟರ್ಕಿಯ ಸೆಕಂಡ್ ಆರ್ಮಿಯ ಕಮಾಂಡರ್ ಜನರಲ್ ಆದಂ ಹುಡುಡಿ ಔಪಚಾರಿಕವಾಗಿ ಬಂಧನಕ್ಕೊಳಗಾದವರಲ್ಲಿ ಸೇರಿದ್ದಾರೆ ಎಂದು ಅನಾಡೊಲು ಏಜನ್ಸಿ ಇಂದು ತಿಳಿಸಿದೆ.

ಸಿರಿಯ, ಇರಾನ್ ಮತ್ತು ಇರಾಕ್‌ಗಳಿಂದ ಬರಬಹುದಾದ ಸಂಭಾವ್ಯ ಬೆದರಿಕೆಯನ್ನು ನಿಭಾಯಿಸುವ ಹೊಣೆ ಸೆಕಂಡ್ ಆರ್ಮಿಯದ್ದಾಗಿದೆ.

ಕ್ಷಿಪ್ರಕ್ರಾಂತಿಯಲ್ಲಿ ಶಾಮೀಲಾಗಿದ್ದಾರೆನ್ನಲಾದ ಸಾವಿರಾರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಕ್ಷಿಪ್ರಕ್ರಾಂತಿಯಲ್ಲಿ 208 ಸರಕಾರ ಪರ ಬೆಂಬಲಿಗರು ಮತ್ತು 24 ಬಂಡುಕೋರರು ಸಾವನ್ನಪ್ಪಿದ್ದಾರೆ.

ಅಮೆರಿಕದಲ್ಲಿ ನೆಲೆಸಿರುವ ಮುಸ್ಲಿಮ್ ಧರ್ಮ ಗುರುವೊಬ್ಬರು ಸೇನಾ ದಂಗೆಯ ಹಿಂದಿದ್ದಾರೆ ಎಂದು ಟರ್ಕಿ ಆರೋಪಿಸಿದೆ.

ಅವರೊಂದಿಗೆ ನಂಟು ಹೊಂದಿರುವರೆನ್ನಲಾದ ಸಾವಿರಾರು ಅಧಿಕಾರಿಗಳನ್ನು ಸರಕಾರ ನ್ಯಾಯಾಂಗ ಮತ್ತು ಆಂತರಿಕ ಸಚಿವಾಲಯದಿಂದ ವಜಾಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News