ಫ್ರಾನ್ಸ್: ತುರ್ತು ಪರಿಸ್ಥಿತಿ 6 ತಿಂಗಳು ವಿಸ್ತರಣೆ

Update: 2016-07-20 18:29 GMT

ಪ್ಯಾರಿಸ್, ಜು. 20: ಫ್ರಾನ್ಸ್‌ನ ನೀಸ್ ನಗರದಲ್ಲಿ ಕಳೆದ ವಾರ ನಡೆದ ಟ್ರಕ್ ದಾಳಿಯ ಹಿನ್ನೆಲೆಯಲ್ಲಿ ದೇಶದಲ್ಲಿ ಜಾರಿಯಲ್ಲಿರುವ ತುರ್ತು ಪರಿಸ್ಥಿತಿಯನ್ನು ಇನ್ನೂ ಆರು ತಿಂಗಳ ಕಾಲ ವಿಸ್ತರಿಸುವ ಪ್ರಸ್ತಾಪಕ್ಕೆ ಫ್ರಾನ್ಸ್ ಸಂಸದರು ಬುಧವಾರ ಅಂಗೀಕಾರ ನೀಡಿದ್ದಾರೆ.

ನೀಸ್ ದಾಳಿ 18 ತಿಂಗಳ ಅವಧಿಯಲ್ಲಿ ನಡೆದ ಮೂರನೆ ಭೀಕರ ದಾಳಿಯಾಗಿದೆ.

ನ್ಯಾಶನಲ್ ಅಸೆಂಬ್ಲಿಯಲ್ಲಿ, ಪೊಲೀಸರಿಗೆ ಹೆಚ್ಚುವರಿ ಶೋಧ ಮತ್ತು ಬಂಧನ ಅಧಿಕಾರವನ್ನು ನೀಡುವ ಪ್ರಸ್ತಾಪದ ಪರವಾಗಿ 489 ಮತಗಳು ಮತ್ತು ವಿರುದ್ಧವಾಗಿ 26 ಮತಗಳು ಬಿದ್ದವು.

‘‘ನಾವು ಒಗ್ಗಟ್ಟು ಮತ್ತು ಏಕಾಗ್ರತೆಯಿಂದ ಇರಬೇಕು. ಯಾಕೆಂದರೆ, ಈ ಬೆದರಿಕೆಯ ಹಿನ್ನೆಲೆಯಲ್ಲಿ ನಾವು ದೃಢವಾಗಿರಬೇಕು’’ ಎಂದು ಪ್ರಧಾನಿ ಮ್ಯಾನುಯಲ್ ವಾಲ್ಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News