×
Ad

ಕೊಹ್ಲಿ ಶತಕದ ನೆರವು ; ಭಾರತ 302/4

Update: 2016-07-22 10:18 IST

ಆಂಟಿಗುವಾ, ಜು.22:ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ದಾಖಲಿಸಿದ 12ನೆ ಟೆಸ್ಟ್ ಶತಕದ ನೆರವಿನಲ್ಲಿ ಭಾರತ ಇಲ್ಲಿ ಗುರುವಾರ  ಆರಂಭಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ನಲ್ಲಿ 90 ಓವರ್ ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 302 ರನ್ ಗಳಿಸಿದೆ.

ಮೊದಲ ದಿನದಾಟ ಕೊನೆಗೊಂಡಾಗ ಕೊಹ್ಲಿ ಔಟಾಗದೆ 143 ರನ್(197 ಎ, 16ಬೌ) ಮತ್ತು ಆರ್. ಅಶ್ವಿನ್ ಔಟಾಗದೆ 22 ರನ್ ಗಳಿಸಿ ಕ್ರೀಸ್ ನಲ್ಲಿದ್ದರು.

42ನೆ ಟೆಸ್ಟ್ ಆಡುತ್ತಿರುವ 27ರ ಹರೆಯದ ಕೊಹ್ಲಿ 134 ಎಸೆತಗಳಲ್ಲಿ 11 ಬೌಂಡರಿಗಳ ಸಹಾಯದಿಂದ 12ನೆ ಶತಕ ಪೂರ್ಣಗೊಳಿಸಿದರು. ಶಿಖರ್ ಧವನ್ 84 ರನ್, ಅಜಿಂಕ್ಯ ರಹಾನೆ 22 ರನ್, ಮುರಳಿ ವಿಜಯ್ 7ರನ್, ಚೇತೇಶ್ವರ ಪೂಜಾರ 16ರನ್  ಗಳಿಸಿ ಔಟಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News