×
Ad

ಸೋಲಿನ ಸುಳಿಯಲ್ಲಿ ವೆಸ್ಟ್ ಇಂಡೀಸ್ : ಫಾಲೋಅನ್ ಹೇರಿದ ವಿರಾಟ್ ಪಡೆ

Update: 2016-07-24 22:30 IST

ಆ್ಯಂಟಿಗುವಾ, ಜು.24: ಇಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತ ಮೇಲುಗೈ ಸಾಧಿಸಿದ್ದು, ವೆಸ್ಟ್ ಇಂಡೀಸ್ ಸೋಲಿನ ಸುಳಿಯಲ್ಲಿ ಸಿಲುಕಿದೆ.

ಸರ್ ವಿವಿಯನ್ ರಿಚಡ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ಗೆ ಕೊಹ್ಲಿ ಪಡೆ ಫಾಲೋ ಆನ್ ಹೇರಿದೆ.

ನಾಲ್ಕನೆ ದಿನವಾಗಿರುವ ರವಿವಾರ ಊಟದ ವಿರಾಮದ ವೇಳೆಗೆ ವಿಂಡೀಸ್ ಎರಡನೆ ಇನಿಂಗ್ಸ್‌ನಲ್ಲಿ 30 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 76 ರನ್ ಗಳಿಸಿತ್ತು.

ಭಾರತ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್ ನಷ್ಟದಲ್ಲಿ 566 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿರುವ ವೆಸ್ಟ್ ಇಂಡೀಸ್ ತಂಡ ವೇಗದ ಬೌಲರ್‌ಗಳಾದ ಉಮೇಶ್ ಯಾದವ್ ಮತ್ತು ಮುಹಮ್ಮದ್ ಶಮಿ ದಾಳಿಗೆ ಸಿಲುಕಿ 90.2 ಓವರ್‌ಗಳಲ್ಲಿ 243 ರನ್‌ಗಳಿಗೆ ಆಲೌಟಾಗಿದೆ. ಇದರೊಂದಿಗೆ ಭಾರತದ ವಿರುದ್ಧ ವೆಸ್ಟ್‌ಇಂಡೀಸ್ 323 ರನ್‌ಗಳ ಹಿನ್ನಡೆ ಅನುಭವಿಸಿದೆ.

ಮೂರನೆ ದಿನ ಊಟದ ವಿರಾಮದ ವೇಳೆಗೆ 44 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 90 ರನ್ ಗಳಿಸಿದ್ದ ವೆಸ್ಟ್ ಇಂಡೀಸ್ ತಂಡ ಬಳಿಕ 153 ರನ್ ಗಳಿಸುವಷ್ಟರಲ್ಲಿ ಆಲೌಟಾಯಿತು.

 ಎರಡನೆ ಇನಿಂಗ್ಸ್ 21/1: ಫಾಲೋ ಆನ್‌ನಿಂದಾಗಿ ಇನಿಂಗ್ಸ್ ಸೋಲಿನ ಭೀತಿಯನ್ನು ಎದುರಿಸುತ್ತಿರುವ ವೆಸ್ಟ್‌ಇಂಡಿಸ್ ಮೂರನೆ ದಿನದಾಟದಂತ್ಯಕ್ಕೆ ಎರಡನೆ ಇನಿಂಗ್ಸ್‌ನಲ್ಲಿ 13 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 21 ರನ್ ಗಳಿಸಿತ್ತು. ಮೊದಲ ಓವರ್‌ನ 5ನೆ ಎಸೆತದಲ್ಲಿ ಆರಂಭಿಕ ದಾಂಡಿಗ ಕ್ರೆಗ್ ಬ್ರಾಥ್‌ವೈಟ್ (2)ಅವರನ್ನು ಇಶಾಂತ್ ಶರ್ಮ ಎಲ್‌ಡಬ್ಲು ಬಲೆಗೆ ಬೀಳಿಸಿದರು. ಬಳಿಕ ಡರನ್ ಬ್ರಾವೊಗೆ ರಾಜೇಂದ್ರ ಚಂದ್ರಿಕಾ ಸಾಥ್ ನೀಡಿದರು. ಮೂರನೆ ದಿನದಾಟದಂದ್ಯಕ್ಕೆ ಚಂದ್ರಿಕಾ 9ರನ್ ಮತ್ತು ಬ್ರಾವೊ 10 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು.

 ಉಮೇಶ್-ಶಮಿ ದಾಳಿಗೆ ಸಿಲುಕಿದ ವಿಂಡೀಸ್: ಭಾರತದ ವೇಗದ ಬೌಲರ್‌ಗಳಾದ ಉಮೇಶ್ ಯಾದವ್ ಮತ್ತು ಮುಹಮ್ಮದ್ ಶಮಿ ದಾಳಿಗೆ ಸಿಲುಕಿದ್ದ ವಿಂಡೀಸ್ ಮೊದಲ ಇನಿಂಗ್‌ನ್ನು 243 ರನ್‌ಗಳಿಗೆ ಕೊನೆಗೊಳಿಸಿದೆ.

ಮುಹಮ್ಮದ್ ಶಮಿ 66ಕ್ಕೆ 4 ವಿಕೆಟ್ ಮತ್ತು ಉಮೇಶ್ ಯಾದವ್ 41ಕ್ಕೆ 4 ವಿಕೆಟ್ ಮತ್ತು ಅಮಿತ್ ಮಿಶ್ರಾ 43ಕ್ಕೆ 2 ವಿಕೆಟ್ ಪಡೆದು ಭಾರತಕ್ಕೆ ಮೇಲುಗೈ ಸಾಧಿಸಲು ನೆರವಾದರು.

ಆರಂಭಿಕ ದಾಂಡಿಗ ಕ್ರೇಗ್ ಬ್ರಾಥ್‌ವೈಟ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಶೇನ್ ಡೌರಿಚ್ ಮಾತ್ರ ಭಾರತದ ದಾಳಿಯನ್ನು ಸಮರ್ಥವಾಗಿ ಎದುರಿಸಿ ತಂಡದ ಖಾತೆಗೆ ಅರ್ಧಶತಕಗಳ ಕೊಡುಗೆ ನೀಡಿದರು. ಆರಂಭಿಕ ದಾಂಡಿಗ ಬ್ರಾಥ್‌ವೈಟ್ ಐದು ಗಂಟೆಗಳ ಕಾಲ ಕ್ರೀಸ್‌ನಲ್ಲಿ ಬ್ಯಾಟಿಂಗ್ ನಡೆಸಿದರು. 218 ಎಸೆತಗಳನ್ನು ಎದುರಿಸಿ 7 ಬೌಂಡರಿಗಳ ನೆರವಿನಿಂದ 74 ರನ್ ಗಳಿಸಿ ನಿರ್ಗಮಿಸಿದರು.

 ಶತಕ ಗಳಿಸುವ ಯೋಜನೆಯಲ್ಲಿದ್ದ ಬ್ರಾಥ್‌ವೈಟ್ 67.3ನೆ ಓವರ್‌ನಲ್ಲಿ ಉಮೇಶ್ ಯಾದವ್ ಎಸೆತವನ್ನು ರಕ್ಷಣಾತ್ಮಕವಾಗಿ ಎದುರಿಸುವಲ್ಲಿ ಎಡವಿ ವಿಕೆಟ್ ಕೀಪರ್ ಸಹಾಗೆ ಕ್ಯಾಚ್ ನೀಡಿದರು. ಆಗ ವಿಂಡೀಸ್‌ನ ಸ್ಕೋರ್ 67.3 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 144 ಆಗಿತ್ತು. ವಿಂಡೀಸ್ 200 ರನ್ ತಲುಪುವ ಮೊದಲೇ ಆಲೌಟಾಗುವ ಹಾದಿಯಲ್ಲಿತ್ತು. ಬಳಿಕ ವಿಕೆಟ್ ಕೀಪರ್ ಡೌರಿಚ್ ಮತ್ತು ನಾಯಕ ಜಾಸನ್ ಹೋಲ್ಡರ್ ಎಂಟನೆ ವಿಕೆಟ್‌ಗೆ 69 ರನ್‌ಗಳ ಕೊಡುಗೆ ನೀಡಿ ಸ್ಕೋರ್‌ನ್ನು 200ರ ಗಡಿ ದಾಟಿಸಿದರು.

 ಹೋಲ್ಡರ್ 70 ನಿಮಿಷಗಳ ಬ್ಯಾಟಿಂಗ್‌ನಲ್ಲಿ 52 ಎಸೆತಗಳನ್ನು ಎದುರಿಸಿದರು.5 ಬೌಂಡರಿ ಮತ್ತು ಸಿಕ್ಸರ್ ಇರುವ 36 ರನ್ ಗಳಿಸಿ ಯಾದವ್‌ಗೆ ವಿಕೆಟ್ ಒಪ್ಪಿಸಿದರು.

 ಗ್ಯಾಬ್ರಿಯಲ್ ಮತ್ತು ಡೌರಿಚ್ ಅಂತಿಮ ವಿಕೆಟ್‌ಗೆ 30 ರನ್ ಸೇರಿಸಿದರು. ಗ್ಯಾಬ್ರಿಯಲ್ 29 ನಿಮಿಷಗಳ ಬ್ಯಾಟಿಂಗ್‌ನಲ್ಲಿ 8 ಎಸೆತಗಳನ್ನು ಎದುರಿಸಿದರು. ಅವರು 2 ರನ್ ಗಳಿಸಿದ್ದರೂ, ಡೌರಿಚ್‌ಗೆ ಉತ್ತಮ ಬೆಂಬಲ ನೀಡಿದರು.

ಡೌರಿಚ್ 107 ನಿಮಿಷಗಳ ಬ್ಯಾಟಿಂಗ್‌ನಲ್ಲಿ 79 ಎಸೆತಗಳನ್ನು ಎದುರಿಸಿದರು.10 ಬೌಂಡರಿಗಳ ಸಹಾಯದಿಂದ 57 ರನ್ ಗಳಿಸಿ ಔಟಾಗದೆ ಉಳಿದರು.

ಭಾರತದ ವಿಕೆಟ್ ಕೀಪರ್ ವೃದ್ದಿಮಾನ್ ಸಹಾ 1 ಸ್ಟಂಪ್ ಮತ್ತು ಐದು ಕ್ಯಾಚ್ ತೆಗೆದುಕೊಂಡು ಮಿಂಚಿದರು.ಮುಹಮ್ಮದ್ ಶಮಿ 13ನೆ ಟೆಸ್ಟ್‌ನಲ್ಲಿ 50 ವಿಕೆಟ್ ಪಡೆದ ದಾಖಲೆ ನಿರ್ಮಿಸಿದರು.

-------------------------------------------------------------------------------------------------------------------------------------------

ಸ್ಕೋರ್ ಪಟ್ಟಿ

ಭಾರತ ಮೊದಲ ಇನಿಂಗ್ಸ್ 161.5 ಓವರ್‌ಗಳಲ್ಲಿ 566/8 ಡಿಕ್ಲೇರ್

 ವೆಸ್ಟ್ ಇಂಡಿಸ್ ಮೊದಲ ಇನಿಂಗ್ಸ್ 90.2 ಓವರ್‌ಗಳಲ್ಲಿ ಆಲೌಟ್ 243

ಬ್ರಾಥ್‌ವೈಟ್ ಸಿ ಸಹಾ ಬಿ ಯಾದವ್74

ಚಂದ್ರಿಕಾಸಿ ಸಹಾ ಬಿ ಶಮಿ16

 ಬಿಶೂ ಸ್ಟಂ. ಸಹಾ ಬಿ ಮಿಶ್ರಾ 12

ಡರನ್ ಬ್ರಾವೊ ಸಿ ಸಹಾ ಬಿ ಶಮಿ11

ಸಾಮುಯೆಲ್ಸ್ ಸಿ ಸಹಾ ಬಿ ಶಮಿ01

ಬ್ಲಾಕ್‌ವುಡ್ ಸಿ ರಹಾನೆ ಬಿ ಶಮಿ00

ಚೇಸ್ ಸಿ ಕೊಹ್ಲಿ ಬಿ ಯಾದವ್23

ಡೌರಿಚ್ ಔಟಾಗದೆ57

ಹೋಲ್ಡರ್ ಸಿ ಸಹಾ ಬಿ ಯಾದವ್36

 ಸಿಆರ್ ಬ್ರಾಥ್‌ವೈಟ್ ಬಿ ಯಾದವ್00

ಗ್ಯಾಬ್ರಿಯಲ್ ಬಿ ಮಿಶ್ರಾ02

ಇತರ11

ವಿಕೆಟ್ ಪತನ: 1-30, 2-68, 3-90, 4-92, 5-92, 6-139, 7-144, 8-213, 9-213, 10-243.

ಬೌಲಿಂಗ್ ವಿವರ ಇಶಾಂತ್ ಶರ್ಮ 20.0-7-44-0

ಯಾದವ್18.0-8-41-4

ಶಮಿ20.0-4-66-4

ಅಶ್ವಿನ್17.0-5-43-0

ಮಿಶ್ರಾ15.2-4-43-2

ವೆಸ್ಟ್‌ಇಂಡಿಸ್ ಎರಡನೆ ಇನಿಂಗ್ಸ್ 30 ಓವರ್‌ಗಳಲ್ಲಿ 76/2

ಬ್ರಾಥ್‌ವೈಟ್ ಎಲ್‌ಬಿಡಬ್ಲು ಬಿ ಶರ್ಮ02

ಚಂದ್ರಿಕಾ ಔಟಾಗದೆ22

ಡರೆನ್ ಬ್ರಾವೊ ಸಿ ರಹಾನೆ ಬಿ ಯಾದವ್ 10

ಸಾಮುಯೆಲ್ಸ್ ಔಟಾಗದೆ39

ಇತರ03

ವಿಕೆಟ್ ಪತನ: 1-2, 2-21

ಬೌಲಿಂಗ್ ವಿವರ

ಇಶಾಂತ್ ಶರ್ಮ9-2-17-1

ಶಮಿ7-3-20-0

ಯಾದವ್9-4-19-1

ಅಶ್ವಿನ್5-2-20-0

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News