ಸ್ಪಿನ್ ಕೈಚಳಕಕ್ಕೆ ಉರುಳಿದ ವಿಂಡೀಸ್: ಭಾರತಕ್ಕೆ ಇನಿಂಗ್ಸ್ ಜಯ

Update: 2016-07-25 03:37 GMT

ಅಂಟಿಗಾ, ಜು.25: ಭಾರತದ ಸ್ಪಿನ್ ಮೋಡಿಗೆ ಮತ್ತೆ ಕುಸಿದ ವೆಸ್ಟ್‌ಇಂಡೀಸ್ ತಂಡ ಭಾರತಕ್ಕೆ ಸುಲಭದ ತುತ್ತಾಯಿತು. ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 92 ರನ್ನುಗಳ ಭರ್ಜರಿ ಜಯ ಸಾಧಿಸಿದ ಭಾರತ ಹೊಸ ದಾಖಲೆ ಬರೆಯಿತು. ಇದು ವಿದೇಶಿ ನೆಲದಲ್ಲಿ ಭಾರತೀಯ ಕ್ರಿಕೆಟ್ ತಂಡದ ಅತಿದೊಡ್ಡ ಅಂತರದ ಜಯ.

ಎರಡನೆ ಇನಿಂಗ್ಸ್‌ನ ಮೊದಲ ಓವರ್‌ನಲ್ಲೇ ವಿಕೆಟ್ ಪಡೆಯುವ ಮೂಲಕ ಉಮೇಶ್ ಯಾದವ್ ಪೆಟ್ಟು ನೀಡಿದರು. ಬಳಿಕ ಅಶ್ವಿನ್ ಕೈಚಳಕ್ಕೆ ವಿಂಡೀಸ್ ಇನಿಂಗ್ಸ್ ಛಿದ್ರವಾಯಿತು. ಅಶ್ವಿನ್ ಐದು ವಿಕೆಟ್‌ಗಳ ಮತ್ತೊಂದು ಗೊಂಚಲು ಪಡೆದರು. ದಿನವಿಡೀ ಭಾರತೀಯ ಸ್ಪಿನ್ನರ್‌ಗಳನ್ನು ಎದುರಿಸಲು ಅತಿಥೇಯ ಆಟಗಾರರು ಪರದಾಡಿದರು. ನಾಲ್ಕನೆ ದಿನವೇ ಭಾರತ ಗೆಲುವಿನ ನಗೆ ಬೀರಿತು.

ಮರ್ಲಾನ್ ಸ್ಯಾಮ್ಯುವೆಲ್ಸ್ ಮಾತ್ರ ಅರ್ಧಶತಕದೊಂದಿಗೆ, ಪ್ರತಿರೋಧ ತೋರಿದರು. ಆದರೆ ಅಮಿತ್ ಮಿಶ್ರಾ ಆಗ ವಿಂಡೀಸ್‌ಗೆ ತಡೆ ಒಡ್ಡಿದರು. ಕೊನೆಯ ಎರಡು ವಿಕೆಟ್‌ಗೆ ಬ್ರೆಟ್‌ವೈಟ್ ಮತ್ತು ಬಿಷೂ ಭಾರತದ ಗೆಲುವಿನ ಔಪಚಾರಿಕತೆಯನ್ನು ವಿಳಂಬಗೊಳಿಸಿದರು. 138 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದ ವೆಸ್ಟ್‌ಇಂಡೀಸ್ ಬೌಲರ್‌ಗಳ ಸಾಹಸದಿಂದಾಗಿ ಕೊನೆ ಎರಡು ವಿಕೆಟ್‌ಗಳಿಗೆ 93 ರನ್ ಗಳಿಸಿತು. ಒಂಬತ್ತನೆಯವರಾಗಿ ಕ್ರೀಸ್‌ಗೆ ಇಳಿದ ಬ್ರೆಟ್‌ವೈಟ್ ವಿಂಡೀಸ್ ಪರ ಗರಿಷ್ಠ ಸ್ಕೋರರ್ ಎನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News