ವಿಂಡೀಸ್ ವಿರುದ್ಧ ಭಾರತಕ್ಕೆ ಇನಿಂಗ್ಸ್ , 92ರನ್‌ ಜಯ

Update: 2016-07-25 05:16 GMT

ಆಂಟಿಗುವಾ, ಜು.25: ಭಾರತದ ಕ್ರಿಕೆಟ್‌ ತಂಡ ಇಲ್ಲಿ ನಡೆದ ಮೊದಲ ಕ್ರಿಕೆಟ್‌ ಟೆಸ್ಟ್ ನಲ್ಲಿ   ವೆಸ್ಟ್ ಇಂಡೀಸ್‌ ವಿರುದ್ಧ ಇನಿಂಗ್ಸ್‌ ಹಾಗೂ 92 ರನ್‌ಗಳ ಜಯ ಗಳಿಸಿದೆ.
ಪಂದ್ಯದ ನಾಲ್ಕನೆ ದಿನವಾಗಿದ್ದ ರವಿವಾರ ಸ್ಪಿನ್ನರ‍್ ರವಿಚಂದ್ರನ್‌ ಅಶ್ವಿನ್‌ ( 83ಕ್ಕೆ 7) ಪ್ರಹಾರಕ್ಕೆ  ಸಿಲುಕಿದ ವೆಸ್ಟ್ ಇಂಡೀಸ್‌ ತಂಡ ಎರಡನೆ ಇನಿಂಗ್ಸ್ ನಲ್ಲಿ 78  ಓವರ‍್ ಗಳಲ್ಲಿ 231 ರನ್‌ಗಳಿಗೆ ಆಲೌಟಾಯಿತು. ಇದರೊಂದಿಗೆ ಭಾರತ ನಾಲ್ಕು ಟೆಸ್ಟ್ ಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿತು.
ಮೊದಲ ಇನಿಂಗ್ಸ್‌ನಲ್ಲಿ ಶತಕ ಹಾಗೂ ವಿಂಡೀಸ್ ತಂಡದ ಏಳು ವಿಕೆಟ್ ಗಳನ್ನು ಕಬಳಿಸಿದ ಅಶ್ವಿನ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್‌ ವಿವರ

ಭಾರತ ಮೊದಲ ಇನಿಂಗ್ಸ್  566/8(ಡಿಕ್ಲೇರ್)

ವೆಸ್ಟ್ಇಂಡೀಸ್ ಮೊದಲ  ಇನಿಂಗ್ಸ್ 243

 ವೆಸ್ಟ್ಇಂಡೀಸ್ ಎರಡನೆ ಇನಿಂಗ್ಸ್  78 ಓವರ್ ಗಳಲ್ಲಿ ಆಲೌಟ್ 231(ಸ್ಯಾಮುಯೆಲ್ಸ್ 50, ಸಿಆರ್ ಬ್ರಾಥ್ ವೈಟ್ ಔಟಾಗದೆ 51, ಬಿಶೂ 45, ಚಂದ್ರಿಕಾ 31, ಹೋಲ್ಡರ್ 16; ಅಶ್ವಿನ್ 83ಕ್ಕೆ 7).

ಪಂದ್ಯಶ್ರೇಷ್ಠ:  ರವಿಚಂದ್ರನ್ ಅಶ್ವಿನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News