×
Ad

ರಶ್ಯದ ಏಳು ಸ್ವಿಮ್ಮರ್‌ಗೆ ಒಲಿಂಪಿಕ್ಸ್‌ನಿಂದ ನಿಷೇಧ

Update: 2016-07-25 23:47 IST

ಪ್ಯಾರಿಸ್, ಜು.25: ಸ್ವಿಮಿಂಗ್ ಜಾಗತಿಕ ಸಂಘಟನೆ ಫಿನಾ ಡೋಪಿಂಗ್ ಪ್ರಕರಣಕ್ಕೆ ಸಂಬಂಧಿಸಿ ರಶ್ಯದ ಏಳು ಈಜುಪಟುಗಳನ್ನು ಮುಂದಿನ ತಿಂಗಳು ನಡೆಯಲಿರುವ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸದಂತೆ ನಿಷೇಧ ಹೇರಿದೆ.

ರವಿವಾರ ಐಒಸಿ ನಿರ್ಧಾರದ ಬಳಿಕ ಫಿನಾ ಈ ತೀರ್ಮಾನಕ್ಕೆ ಬಂದಿರುವ ಮೊದಲ ಕ್ರೀಡಾ ಸಂಘಟನೆಯಾಗಿದೆ. ರಶ್ಯದ ಅಥ್ಲೀಟ್‌ಗಳನ್ನು ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿಸುವ ಬಗ್ಗೆ ನಿರ್ಧರಿಸುವುದು ಆಯಾ ಕ್ರೀಡಾ ಫಡರೇಶನ್‌ಗಳಿಗೆ ಬಿಟ್ಟ ವಿಚಾರ ಎಂದು ಐಒಸಿ ಹೇಳಿತ್ತು.

 2012ರ ಒಲಿಂಪಿಕ್ಸ್‌ನಲ್ಲಿ 4-100 ಮೀ. ಫ್ರೀಸ್ಟೈಲ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ವ್ಲಾಡಿಮಿರ್ ಮೊರೊರೊವ್ ಹಾಗೂ ನಿಕಿತಾ ಲೊಬಿನ್‌ಸೆವ್ ಹಾಗೂ 2012ರ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದ ಇನ್ನೋರ್ವ ಸ್ವಿಮ್ಮರ್ ಯುಲಿಯಾ ಎಫಿಮೊವಾ ನಿಷೇಧಕ್ಕೆ ಒಳಗಾಗಿರುವ ಏಳು ಸ್ವಿಮ್ಮರ್‌ಗಳಲ್ಲಿ ಪ್ರಮುಖರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News