ವಿಂಡೀಸ್ ವಿರುದ್ಧ ಕೊಹ್ಲಿ ಪಡೆಗೆ ವಿರಾಟ ವಿಜಯ

Update: 2016-07-25 18:23 GMT

ನಾರ್ತ್ ಸೌಂಡ್(ಆ್ಯಂಟಿಗುವಾ), ಜು.25: ವಿರಾಟ್ ಕೊಹ್ಲಿ ನಾಯಕತ್ವದ ಭಾರತದ ಕ್ರಿಕೆಟ್ ತಂಡ ಇಲ್ಲಿ ನಡೆದ ವಿಂಡೀಸ್ ವಿರುದ್ಧ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಇನಿಂಗ್ಸ್ ಮತ್ತು 92 ರನ್‌ಗಳ ಭರ್ಜರಿ ಜಯ ಗಳಿಸಿದೆ.
ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಟೆಸ್ಟ್‌ನ ನಾಲ್ಕನೆ ದಿನ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ದಾಳಿಗೆ ಸಿಲುಕಿದ ವೆಸ್ಟ್‌ಇಂಡೀಸ್ ಎರಡನೆ ಇನಿಂಗ್ಸ್‌ನಲ್ಲಿ 78 ಓವರ್‌ಗಳಲ್ಲಿ 231 ರನ್‌ಗಳಿಗೆ ಆಲೌಟಾಗುವುದರೊಂದಿಗೆ ಭಾರತ ಉಪಖಂಡದ ಹೊರಗಡೆ ಭರ್ಜರಿ ಗೆಲುವು ಸಂಪಾದಿಸಿತು.

ರವಿಚಂದ್ರನ್ ಅಶ್ವಿನ್ 83ಕ್ಕೆ 7 ವಿಕೆಟ್ ಉಡಾಯಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅವರು ಭಾರತದ ಪರ ಮೊದಲ ಇನಿಂಗ್ಸ್‌ನಲ್ಲಿ ಶತಕ (113) ದಾಖಲಿಸಿದ್ದರು. ಮೂರನೆ ದಿನದಾಟದಂತ್ಯಕ್ಕೆ 13 ಓವರ್‌ಗಳಲ್ಲಿ 21ಕ್ಕೆ 1 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೆಸ್ಟ್‌ಇಂಡೀಸ್ ತಂಡ ಇನಿಂಗ್ಸ್ ಸೋಲು ತಪ್ಪಿಸಲು 301 ರನ್‌ಗಳ ಸವಾಲನ್ನು ಪಡೆದಿತ್ತು. ಆದರೆ ಅದು ಶನಿವಾರದ ಮೊತ್ತಕ್ಕೆ 210 ರನ್ ಗಳಿಸಲಷ್ಟೇ ಶಕ್ತವಾಯಿತು.
  88ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ವೆಸ್ಟ್‌ಇಂಡಿಸ್ ಅಶ್ವಿನ್ ಪ್ರಹಾರವನ್ನು ಎದುರಿಸಲು ಸಾಧ್ಯವಾಗದೆ ಈ ಮೊತ್ತಕ್ಕೆ 44 ರನ್ ಸೇರಿಸುವಷ್ಟರಲ್ಲಿ ಮತ್ತೆ 6 ವಿಕೆಟ್‌ಗಳು ಪತನಗೊಂಡಿತು. 132ಕ್ಕೆ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ವೆಸ್ಟ್‌ಇಂಡೀಸ್‌ಗೆ ಕಾರ್ಲೊಸ್ ಬ್ರಾಥ್‌ವೈಟ್ (ಔಟಾಗದೆ 51 ರನ್) ಮತ್ತು ದೇವೆಂದ್ರ ಬಿಶೂ(45) ಅವರು 9ನೆ ವಿಕೆಟ್‌ಗೆ 95 ರನ್‌ಗಳನ್ನು ಸೇರಿಸುವ ಮೂಲಕ ಇನಿಂಗ್ಸ್ ಸೋಲು ತಪ್ಪಿಸಲು ಹೋರಾಟ ನಡೆಸಿದರು.
77.3ನೆ ಓವರ್‌ನಲ್ಲಿ ಅಶ್ವಿನ್ ಬೌಲಿಂಗ್‌ನಲ್ಲಿ ಬಿಶೂ ಅವರು ಪೂಜಾರಗೆ ಕ್ಯಾಚ್ ನೀಡಿ ನಿರ್ಗಮಿಸುವುದರೊಂದಿಗೆ ಇವರ ಜೊತೆಯಾಟ ಕೊನೆಗೊಂಡಿತು. 2 ಗಂಟೆ 28 ನಿಮಿಷಗಳ ಕಾಲ ಕ್ರೀಸ್‌ಗೆ ಅಂಟಿಕೊಂಡು ಇವರು ಬ್ಯಾಟಿಂಗ್ ನಡೆಸಿದ್ದರು. 16ನೆ ಟೆಸ್ಟ್ ಆಡುತ್ತಿರುವ ಗಯಾನದ ಸ್ಪಿನ್ನರ್ ಬಿಶೂ ಚೊಚ್ಚಲ ಅರ್ಧಶತಕ ದಾಖಲಿಸುವ ಕಡೆಗೆ ಹೆಜ್ಜೆ ಇರಿಸಿದ್ದರು. ಆದರೆ 45ರಲ್ಲಿ ಅವರ ಬ್ಯಾಟಿಂಗ್ ಕೊನೆಗೊಂಡಿತು. 74 ಎಸೆತಗಳನ್ನು ಎದುರಿಸಿದ ಅವರು 6 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು.
77.3ನೆ ಓವರ್‌ನಲ್ಲಿ ಬಿಶೂಗೆ ಪೆವಿಲಿಯನ್ ಹಾದಿ ತೋರಿಸಿದ ಅಶ್ವಿನ್ ಅದೇ ಓವರ್‌ನ ಕೊನೆಯ ಎಸೆತದಲ್ಲಿ ಗ್ಯಾಬ್ರಿಯಲ್ (4) ಅವರನ್ನು ಪೆವಿಲಿಯನ್‌ಗೆ ಅಟ್ಟುವುದರೊಂದಿಗೆ ವಿಂಡೀಸ್ ಆಲೌಟಾಯಿತು.
 ಮೂರನೆ ಟೆಸ್ಟ್ ಆಡುತ್ತಿರುವ ಆಲ್‌ರೌಂಡರ್ ಕಾರ್ಲೊಸ್ ಬ್ರಾಥ್‌ವೈಟ್ ಮೂರನೆ ಅರ್ಧಶತಕ (51ರನ್, 82ಎ, 3ಬೌ,2ಸಿ) ದಾಖಲಿಸಿ ಅಜೇಯರಾಗಿ ಉಳಿದರು.
ಟೀ ವಿರಾಮದ ಬಳಿಕ 77ನೆ ಓವರ್‌ನ ಅಂತಿಮ ಎಸೆತದಲ್ಲಿ ಬ್ರಾಥ್‌ವೈಟ್ 2 ರನ್ ಗಳಿಸುವ ಮೂಲಕ ಅರ್ಧಶತಕ ಪೂರ್ಣಗೊಳಿಸಿದರು.
  ವಿಂಡೀಸ್ ಪರ ಎರಡನೆ ಇನಿಂಗ್ಸ್‌ನಲ್ಲಿ ಇಬ್ಬರು ಅರ್ಧಶತಕ ಪೂರ್ಣಗೊಳಿಸಿದ್ದರು.ಮರ್ಲಾನ್ ಸ್ಯಾಮುಯೆಲ್ಸ್ 50 ರನ್ ಗಳಿಸಿದರು. ಭೋಜನಾ ವಿರಾಮದ ಬಳಿಕ ಸ್ಯಾಮುಯೆಲ್ಸ್ ಮತ್ತು ರಾಜೇಂದ್ರ ಚಂದ್ರಿಕಾ 3ನೆ ವಿಕೆಟ್‌ಗೆ 67 ರನ್‌ಗಳ ಜೊತೆಯಾಟ ನೀಡಿದ್ದರು. 31 ರನ್ ಗಳಿಸಿದ್ದ ಚಂದ್ರಿಕಾ ಅವರ ವಿಕೆಟ್ ಪಡೆಯುವುದರೊಂದಿಗೆ ಅಶ್ವಿನ್ ತನ್ನ ಮೊದಲ ವಿಕೆಟ್ ಜಮೆ ಮಾಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಅಶ್ವಿನ್ 17 ಓವರ್‌ಗಳಲ್ಲಿ 43 ರನ್ ನೀಡಿದ್ದರೂ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಭಾರತ ಮೊದಲ ಇನಿಂಗ್ಸ್‌ನಲ್ಲಿ 161.5 ಓವರ್‌ಗಳಲ್ಲಿ 566 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ವಿಂಡೀಸ್ ಮೊದಲ ಇನಿಂಗ್ಸ್‌ನಲ್ಲಿ 243 ರನ್‌ಗಳಿಗೆ ಆಲೌಟಾಗುವುದರೊಂದಿಗೆ ಫಾಲೋ ಆನ್‌ಗೆ ಒಳಗಾಗಿತ್ತು.

ಸ್ಕೋರ್ ಪಟ್ಟಿ
ಭಾರತ ಮೊದಲ ಇನಿಂಗ್ಸ್ 161.5 ಓವರ್‌ಗಳಲ್ಲಿ 566/8 ಡಿಕ್ಲೇರ್
 ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ 90.2 ಓವರ್‌ಗಳಲ್ಲಿ ಆಲೌಟ್ 243
 ವೆಸ್ಟ್ ಇಂಡೀಸ್ ಎರಡನೆ ಇನಿಂಗ್ಸ್ 78 ಓವರ್‌ಗಳಲ್ಲಿ ಆಲೌಟ್ 231
ಕ್ರೇಗ್‌ಬ್ರಾಥ್‌ವೈಟ್ ಎಲ್‌ಬಿಡಬ್ಲು ಬಿ ಶರ್ಮ02
 ಚಂದ್ರಿಕಾ ಸಿ ಸಹಾ ಬಿ ಅಶ್ವಿನ್31
ಡರನ್ ಬ್ರಾವೊ ಸಿ ರಹಾನೆ ಬಿ ಯಾದವ್10
  ಸಾಮುಯೆಲ್ಸ್ ಬಿ ಅಶ್ವಿನ್50
 ಬ್ಲಾಕ್‌ವುಡ್ ಸಿ ಕೊಹ್ಲಿ ಬಿ ಅಶ್ವಿನ್00
 ಚೇಸ್ ಸಿ ರಾಹುಲ್ ಬಿ ಅಶ್ವಿನ್08
  ಡೌರಿಚ್ ಎಲ್‌ಬಿಡಬ್ಲು ಬಿ ಮಿಶ್ರಾ09
 ಹೋಲ್ಡರ್ ಬಿ ಅಶ್ವಿನ್16
ಕಾರ್ಲೊಸ್ ಬ್ರಾಥ್‌ವೈಟ್ ಔಟಾಗದೆ51
 ಬಿಶೂ ಸಿ ಪೂಜಾರ ಬಿ ಅಶ್ವಿನ್45
 ಗ್ಯಾಬ್ರಿಯಲ್ ಬಿ ಅಶ್ವಿನ್04
ಇತರ05
ವಿಕೆಟ್ ಪತನ: 1-2-, 2-21, 3-88, 4-92, 5-101, 6-106, 7-120, 8-132, 9-227, 10-231

      ಬೌಲಿಂಗ್ ವಿವರ

ಇಶಾಂತ್ ಶರ್ಮ 11-2-27-1
ಯಾದವ್13-4-34-1
 ಶಮಿ10-3-26-0
 ಅಶ್ವಿನ್25-8-83-7
 ಮಿಶ್ರಾ19-3-61-1
ಪಂದ್ಯಶ್ರೇಷ್ಠ: ಆರ್.ಅಶ್ವಿನ್
,,,,,,,,,,,,,,,
ಹೈಲೈಟ್ಸ್
*ಭಾರತ ಮೊದಲ ಬಾರಿ ಉಪಖಂಡದ ಹೊರಗೆ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ.
*ವಿಂಡೀಸ್ ಮೊದಲ ಬಾರಿ ಹೀನಾಯ ಸೋಲು ಅನುಭವಿಸಿದೆ.
*ಭಾರತ ಏಷ್ಯಾದ ಹೊರಗೆ ನಡೆದ ಕಳೆದ 24 ಟೆಸ್ಟ್‌ಗಳಲ್ಲಿ 2ನೆ ಗೆಲುವು ದಾಖಲಿಸಿದೆ.
* ಅಶ್ವಿನ್ 83ಕ್ಕೆ7 ವಿಕೆಟ್ ಪಡೆಯುವ ಮೂಲಕ ಭಾರತ ಪರ ಅತ್ಯುತ್ತಮ ಸಾಧನೆ ಮಾಡಿರುವ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.
* ಅಶ್ವಿನ್ ಸೇರಿದಂತೆ ಮೂವರು ಆಟಗಾರರು ಈ ವರೆಗೆ ಒಂದೇ ಟೆಸ್ಟ್‌ನಲ್ಲಿ ಶತಕ ಮತ್ತು 7 ವಿಕೆಟ್ ಉಡಾಯಿಸಿದ ಸಾಧನೆ ಮಾಡಿದ್ದಾರೆ.
*ಅಶ್ವಿನ್ ಟೆಸ್ಟ್‌ನಲ್ಲಿ 5ನೆ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
*ಅಶ್ವಿನ್ 33 ಟೆಸ್ಟ್‌ಗಳಲ್ಲಿ 17ನೆ ಬಾರಿ 5 ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ.
* ಮೊದಲ ಟೆಸ್ಟ್‌ನಲ್ಲಿ ಅಶ್ವಿನ್ ಶತಕ ಮತ್ತು 7 ವಿಕೆಟ್, ಕೊಹ್ಲಿ ದ್ವಿಶತಕದ ಸಾಧನೆ ಮಾಡಿದ್ದಾರೆ.
*ದೇವೆಂದ್ರ ಬಿಶೂ ಮತ್ತು ಕಾರ್ಲೊಸ್ ಬ್ರಾಥ್‌ವೈಟ್ 9ನೆ ವಿಕೆಟ್‌ಗೆ 95 ರನ್‌ಗಳ ಜೊತೆಯಾಟ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News