ಮುಂಬೈ ತಂಡ ಚಾಂಪಿಯನ್

Update: 2016-07-25 18:25 GMT

ಮಪೂಸ(ಗೋವಾ), ಜು.25: ಮುಂಬೈ ಫೈವ್ ತಂಡ ಮೊದಲ ಆವೃತ್ತಿಯ ಪ್ರೀಮಿಯರ್ ಫುಸ್ಟಾಲ್ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದೆ.

ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನ ಸಡನ್‌ಡೆತ್ ಮೂಲಕ ಕೊಚ್ಚಿ-5 ತಂಡವನ್ನು ಸೋಲಿಸಿರುವ ಮುಂಬೈ-5 ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಉಭಯ ತಂಡಗಳು ನಿಗದಿತ 40 ನಿಮಿಷಗಳ ಆಟದ ಅಂತ್ಯಕ್ಕೆ 1-1 ರಿಂದ ಟೈ ಸಾಧಿಸಿದ ಹಿನ್ನೆಲೆಯಲ್ಲಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಪೆಡ್ಡಮ್ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಪೆನಾಲ್ಟಿ ಶೂಟೌಟ್‌ನಲ್ಲೂ ಉಭಯ ತಂಡಗಳು 2-2 ರಿಂದ ಸಮಬಲ ಸಾಧಿಸಿದವು. ಆಗ ಪಂದ್ಯದ ಫಲಿತಾಂಶವನ್ನು ಸಡನ್ ಡೆತ್‌ನಲ್ಲಿ ನಿರ್ಧರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News