ಕಾಂಟಾಗೆ ಚೊಚ್ಚಲ ಡಬ್ಲುಟಿಎ ಪ್ರಶಸ್ತಿ

Update: 2016-07-25 18:27 GMT

ಸಾನ್ ಫ್ರಾನ್ಸಿಸ್ಕೊ, ಜು.25: ವಿಶ್ವದ ಮಾಜಿ ನಂ.1 ಆಟಗಾರ್ತಿ ವೀನಸ್ ವಿಲಿಯಮ್ಸ್‌ರನ್ನು ಮಣಿಸಿದ ಬ್ರಿಟನ್‌ನ ಜೋಹನ್ನಾ ಕಾಂಟಾ ಚೊಚ್ಚಲ ಡಬ್ಲುಟಿಎ ಪ್ರಶಸ್ತಿ ಜಯಿಸಿದ್ದಾರೆ.

ರವಿವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ವಿಶ್ವದ 18ನೆ ರ್ಯಾಂಕಿನ ಆಟಗಾರ್ತಿ ಕಾಂಟಾ 50ನೆ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದ ವೀನಸ್‌ರನ್ನು 7-5, 5-7, 6-2 ಸೆಟ್‌ಗಳ ಅಂತರದಿಂದ ಸೋಲಿಸಿ ಪ್ರಶಸ್ತಿ ಜಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News