ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್‌ಗೆ ಭರ್ಜರಿ ಜಯ

Update: 2016-07-26 18:04 GMT

ಹೊಸದಿಲ್ಲಿ, ಜು.26: ನಾಲ್ಕನೆ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಹಾಗೂ ಪುಣೇರಿ ಪಲ್ಟನ್ ತಂಡಗಳು ಜಯಭೇರಿ ಬಾರಿಸಿವೆ.

ಇಲ್ಲಿನ ತ್ಯಾಗರಾಜ್ ಕ್ರೀಡಾ ಸಂಕೀರ್ಣದಲ್ಲಿ ನಡೆದ 53ನೆ ಪಂದ್ಯದಲ್ಲಿ ತೆಲುಗು ತಂಡ ಪಾಟ್ನಾ ಪೈರಟ್ಸ್ ತಂಡವನ್ನು 21 ಅಂಕಗಳ ಅಂತರ(46-25)ದಿಂದ ಹೀನಾಯವಾಗಿ ಸೋಲಿಸಿ ಶಾಕ್ ನೀಡಿತು. ಸತತ 9ನೆ ಜಯ ಸಾಧಿಸಿರುವ ಟೈಟಾನ್ಸ್ ಗೆಲುವಿನ ಓಟ ಮುಂದುವರಿಸಿದೆ. 13 ಅಂಕ ಗಳಿಸಿದ ರಾಹುಲ್ ಚೌಧರಿ ಟೈಟಾನ್ಸ್ ಗೆಲುವಿನ ಓಟಕ್ಕೆ ಕಾಣಿಕೆ ನೀಡಿದರು.

54ನೆ ಪಂದ್ಯದಲ್ಲಿ ಪುಣೇರಿ ತಂಡ ದಬಾಂಗ್ ಡೆಲ್ಲಿ ತಂಡವನ್ನು 5 ಅಂಕಗಳ ಅಂತರದಿಂದ(39-34) ಸೋಲಿಸಿತು.

ತನ್ನ 14ನೆ ಪಂದ್ಯದಲ್ಲಿ ಹೀನಾಯವಾಗಿ ಸೋತ ಹೊರತಾಗಿಯೂ 52 ಅಂಕ ಗಳಿಸಿರುವ ಪಾಟ್ನಾ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡು ಪ್ಲೇ-ಆಫ್‌ಗೆ ತೇರ್ಗಡೆಯಾಗಿದೆ. 14 ಪಂದ್ಯಗಳಲ್ಲಿ 8ನೆ ಜಯ ಸಾಧಿಸಿರುವ ತೆಲುಗು ಟೈಟಾನ್ಸ್ ಒಟ್ಟು 50 ಅಂಕ ಸಂಪಾದಿಸಿ ಎರಡನೆ ಸ್ಥಾನದಲ್ಲಿದೆ.

13ನೆ ಪಂದ್ಯದಲ್ಲಿ 5ನೆ ಜಯ ಸಾಧಿಸಿ 37 ಅಂಕ ಗಳಿಸಿರುವ ಪುಣೇರಿ ತಂಡ ನಾಲ್ಕನೆ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News