ನರಸಿಂಗ್ ಬೆಂಬಲಕ್ಕೆ ನಿಂತ ಯೋಗೇಶ್ವರ್
Update: 2016-07-26 23:35 IST
ಹೊಸದಿಲ್ಲಿ, ಜು.26: ‘‘ನನಗೆ ಯಾದವ್ ಮೇಲೆ ಸಂಪೂರ್ಣ ವಿಶ್ವಾಸವಿದೆ. ಈ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಬೇಕಾಗಿದೆ’’ಎಂದು ಹಿರಿಯ ಕುಸ್ತಿಪಟು ಯೋಗೇಶ್ವರ್ ದತ್ತ್ ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿಬಿದ್ದಿರುವ ಕುಸ್ತಿಪಟು ನರಸಿಂಗ್ ಯಾದವ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ಕುಸ್ತಿಪಟುಗಳು ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿರುವುದು ತುಂಬಾ ಬೇಸರದ ವಿಷಯ. ಈ ಪ್ರಕರಣವನ್ನು ತನಿಖೆಗೆ ಗುರಿಪಡಿಸಬೇಕು. ನರಸಿಂಗ್ ಉದ್ದೀಪನಾ ದ್ರವ್ಯ ಸೇವಿಸಿಲ್ಲ ಎನ್ನುವ ಬಗ್ಗೆ ತನಗೆ ವಿಶ್ವಾಸವಿದೆ ಎಂದು ಯೋಗೇಶ್ವರ್ ಟ್ವೀಟ್ ಮಾಡಿದ್ದಾರೆ.
ನರಸಿಂಗ್ ಬುಧವಾರ ನಾಡಾದ ಶಿಸ್ತುಸಮಿತಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದು, ಅವರಿಗೆ ತಾನು ಮುಗ್ಧ ಎಂದು ಸಾಬೀತುಪಡಿಸಲು ಇದು ಕೊನೆಯ ಅವಕಾಶವಾಗಿದೆ.