ವೆಸ್ಟ್‌ಇಂಡೀಸ್ ತಂಡಕ್ಕೆ ಯುವ ಬೌಲರ್ ಜೋಸೆಫ್ ಆಯ್ಕೆ
ಕಿಂಗ್ಸ್‌ಸ್ಟನ್, ಜು.28: ಭಾರತ ವಿರುದ್ಧ ಶನಿವಾರ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಯುವ ವೇಗದ ಬೌಲರ್ ಅಲ್‌ಝಾರ್ರಿ ಜೋಸೆಫ್‌ರನ್ನು ಕಣಕ್ಕಿಳಿಸಲು ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡ ನಿರ್ಧರಿಸಿದೆ.
19ರ ಹರೆಯದ ಜೋಸೆಫ್ ಈ ವರ್ಷ ಅಂಡರ್-19 ವಿಶ್ವಕಪ್‌ನ್ನು ಜಯಿಸಿದ್ದ ವೆಸ್ಟ್‌ಇಂಡೀಸ್ ತಂಡದ ಸ್ಟಾರ್ ಆಟಗಾರರ ಪೈಕಿ ಓರ್ವರಾಗಿದ್ದಾರೆ. ವಿಶ್ವಕಪ್‌ನಲ್ಲಿ ಒಟ್ಟು 13 ವಿಕೆಟ್‌ಗಳನ್ನು ಕಬಳಿಸಿದ್ದ ಜೋಸೆಫ್ ತಂಡ ಚಾಂಪಿಯನ್ ಆಗಲು ಪ್ರಮುಖ ಪಾತ್ರವಹಿಸಿದ್ದರು.
ಆ್ಯಂಟಿಗುವಾದಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ವಿಂಡೀಸ್‌ನ ವಿರುದ್ಧ ಇನಿಂಗ್ಸ್ ಹಾಗೂ 92 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತ್ತು.
ವೆಸ್ಟ್‌ಇಂಡೀಸ್ ಟೆಸ್ಟ್ ತಂಡ:
ಜೇಸನ್ ಹೋಲ್ಡರ್(ನಾಯಕ), ಕ್ರೆಗ್ ಬ್ರಾತ್‌ವೈಟ್, ದೇವೇಂದ್ರ ಬಿಶೂ, ಜೆರ್ಮೈನ್ ಬ್ಲಾಕ್‌ವುಡ್, ಕಾರ್ಲೊಸ್ ಬ್ರಾತ್‌ವೈಟ್, ಡರೆನ್ ಬ್ರಾವೊ, ರಾಜಿಂದ್ರ ಚಂದ್ರಿಕ, ರಾಸ್ಟನ್ ಚೇಸ್, ಮಿಗುಯೆಲ್ ಕುಮಿನ್ಸ್, ಶೇನ್ ಡೌರಿಚ್, ಶಾನೊನ್ ಗಾಬ್ರೈಲ್, ಎ.ಜೋಸೆಫ್, ಲಿಯೊನ್ ಜಾನ್ಸನ್ ಹಾಗೂ ಮರ್ಲಾನ್ ಸ್ಯಾಮುಯೆಲ್ಸ್.