ಶಿರವಸ್ತ್ರ ಧರಿಸಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಪ್ರಥಮ ಮುಸ್ಲಿಮ್ ಮಹಿಳೆ
ವಾಷಿಂಗ್ಟನ್,ಜುಲೈ 28: ಇಬ್ತಿಹಾಜ್ ಮುಹಮ್ಮದ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಅಮೆರಿಕದ ತಂಡದಲ್ಲಿರುವ ಏಕೈಕ ಮುಸ್ಲಿಂ ಮಹಿಳೆಯಾಗಿದ್ದಾರೆ ಎಂದು ವರದಿಯಾಗಿದೆ. ಶಿರವಸ್ತ್ರ ಧರಿಸಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಪ್ರಥಮ ಮುಸ್ಲಿಮ್ ಮಹಿಳೆ ಕೂಡಾ ಅವರೇ ಆಗಿದ್ದು, ಅಮೆರಿಕದ ಫೆನ್ಸಿಂಗ್ ತಂಡದಲ್ಲಿ ಅವರು ಸ್ಪರ್ಧಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಅಮೆರಿಕದ ಮುಂಚೂಣಿ ಫೆನ್ಸಿಂಗ್ ಪಟು ಆಗಿರುವ ಇಬ್ತಿಯಾಜ್ ಮುಹಮ್ಮದ್ 2012ರಲ್ಲಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದರು. ಆದರೆ ಗಾಯಾಳುವಾದ್ದರಿಂದ ಅವರಿಗೆ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಫೆನ್ಸಿಂಗ್ ತಂಡ ಹಾಗೂ ವೈಯಕ್ತಿಕ ವಿಭಾಗದಲ್ಲಿಯೂ ಇಬ್ತಿಯಾಜ್ ಮುಹಮ್ಮದ ಈ ಸಲ ಸ್ಪರ್ಧಿಸುತ್ತಿದ್ದಾರೆ. ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದರೊಂದಿಗೆ ಶಿರವಸ್ತ್ರ ಧರಿಸಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಮೊದಲ ಮಹಿಳೆ ಇಬ್ತಿಯಾಜ್ ಎಂದು ದಾಖಲೆಗೆ ಸೇರಲಿದ್ದಾರೆಂದು ವರದಿಯಾಗಿದೆ.
ಇಬ್ತಿಯಾಜ್ ಅಮೆರಿಕದಲ್ಲಿ ಎರಡನೆ ಶ್ರೇಯಾಂಕವನ್ನೂ ಜಗತ್ತಿನಲ್ಲಿ ಏಳನೆ ಶ್ರೇಯಾಂಕವನ್ನು ಹೊಂದಿದ್ದು 2014ರ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅಮೆರಿಕಕ್ಕಾಗಿ ಐದಕ್ಕೂ ಹೆಚ್ಚು ಬಾರಿ ಪದಕಗಳಿಸಿದ ಖ್ಯಾತಿ ಅವರಿಗಿದೆ. ರಿಯೋ ಒಲಿಂಪಿಕ್ಸ್‌ನಲ್ಲಿ ಅಮೆರಿಕ ಪದಕ ನಿರೀಕ್ಷಿಸುವವರಲ್ಲಿ ಇಬ್ತಿಯಾಜ್ ಕೂಡಾ ಸೇರಿದ್ದಾರೆಂದು ವರದಿ ತಿಳಿಸಿದೆ.