ಪಾಕ್ ವಿರುದ್ಧದ 3ನೆ ಟೆಸ್ಟ್‌ಗೆ ಸ್ಟೋಕ್ಸ್ ಅಲಭ್ಯ

Update: 2016-07-28 07:17 GMT

ಲಂಡನ್, ಜು.28: ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಗಾಯದ ಸಮಸ್ಯೆಯ ಕಾರಣದಿಂದ ಮುಂದಿನ ವಾರ ಎಡ್ಜ್‌ಬಾಸ್ಟನ್‌ನಲ್ಲಿ ಆರಂಭವಾಗಲಿರುವ ಪಾಕಿಸ್ತಾನ ವಿರುದ್ಧದ ಮೂರನೆ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಬುಧವಾರ ತಿಳಿಸಿದೆ.

ಸೋಮವಾರ ಮ್ಯಾಂಚೆಸ್ಟರ್‌ನಲ್ಲಿ ನಡೆದ ಎರಡನೆ ಟೆಸ್ಟ್‌ನ ನಾಲ್ಕನೆ ದಿನದಾಟದ ವೇಳೆ ತನ್ನ 6ನೆ ಓವರ್ ಬೌಲಿಂಗ್ ಮಾಡುತ್ತಿದ್ದಾಗ ವೇಗದ ಬೌಲರ್ ಸ್ಟೋಕ್ಸ್ ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು. 2ನೆ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 330 ರನ್‌ಗಳ ಅಂತರದಿಂದ ಜಯ ಸಾಧಿಸಿ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಿಂದ ಸಮಬಲಗೊಳಿಸಿತ್ತು.

ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಇನ್ನೋರ್ವ ಆಲ್‌ರೌಂಡರ್ ಕ್ರಿಸ್ ವೋಕ್ಸ್ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಮುಂದಿನ ವಾರ ಆರಂಭವಾಗಲಿರುವ 3ನೆ ಟೆಸ್ಟ್‌ನಲ್ಲಿ ವೋಕ್ಸ್‌ಗೆ ಉತ್ತಮ ಪ್ರದರ್ಶನ ನೀಡಿ ತಂಡದಲ್ಲಿ ಸ್ಥಾನ ಗಟ್ಟಿಗೊಳಿಸುವ ಉತ್ತಮ ಅವಕಾಶವಿದೆ.

 ಇಂಗ್ಲೆಂಡ್ ತಂಡ 3ನೆ ಟೆಸ್ಟ್‌ಗೆ 10 ಮಂದಿ ಫಿಟ್ ಆಟಗಾರರೊಂದಿಗೆ ವೇಗದ ಬೌಲರ್ ಜಾಕ್ ಬಾಲ್, ಸ್ಟೀವನ್ ಫಿನ್ ಹಾಗೂ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಸಹಿತ 13 ಆಟಗಾರರನ್ನು ಆಯ್ಕೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News