×
Ad

ತಂದೆಯಾದ ಹರ್ಭಜನ್ ಸಿಂಗ್

Update: 2016-07-28 17:15 IST

 ಹೊಸದಿಲ್ಲಿ, ಜು.28: ಭಾರತದ ಹಿರಿಯ ಆಫ್-ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ಪತ್ನಿ ಗೀತಾ ಬಾಸ್ರಾ ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಹರ್ಭಜನ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗೀತಾ ಬಾಸ್ರಾರನ್ನು ವಿವಾಹವಾಗಿದ್ದರು.

 ಭಾರತದ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್ ಪೈಕಿ ಓರ್ವರಾಗಿರುವ ಹರ್ಭಜನ್ 2016ರ ಏಷ್ಯಾಕಪ್‌ನಲ್ಲಿ ತನ್ನ ದೇಶದ ಪರ ಕೊನೆಯ ಪಂದ್ಯ ಆಡಿದ್ದರು.

36ರ ಹರೆಯದ ಹರ್ಭಜನ್ 104 ಟೆಸ್ಟ್‌ಗಳಲ್ಲಿ 417 ವಿಕೆಟ್ ಹಾಗೂ 236 ಏಕದಿನ ಪಂದ್ಯಗಳಲ್ಲಿ 269 ವಿಕೆಟ್‌ಗಳನ್ನು ಉರುಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News