×
Ad

ಮೂರನೆ ಬಾರಿ ಒಲಿಂಪಿಕ್ಸ್ ಟಿಕೆಟ್ ಪಡೆದ ಸೈನಾ, ಗಗನ್‌

Update: 2016-07-28 23:14 IST

ವಿಶ್ವದ ಮಾಜಿ ನಂ.1 ಬ್ಯಾಡ್ಮಿಂಟನ್ ಆಟಗಾರ್ತಿ ಭಾರತದ ಸೈನಾ ನೆಹ್ವಾಲ್ ಮೂರನೆ ಬಾರಿ ಒಲಿಂಪಿಕ್ಸ್‌ನಲ್ಲಿ ಪದಕದ ಬೇಟೆಗೆ ಹೊರಟಿದ್ದಾರೆ. ಉತ್ತಮ ಫಾರ್ಮ್‌ನಲ್ಲಿರುವ ಸೈನಾ 2008ರಲ್ಲಿ ಮೊದಲ ಬಾರಿ ಒಲಿಂಪಿಕ್ಸ್‌ಗೆ ಟಿಕೆಟ್ ಪಡೆದ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ನಿರ್ಗಮಿಸಿದ್ದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು.

ಹೆಸರು: ಸೈನಾ ನೆಹ್ವಾಲ್
ಪ್ರಾಯ: 26, ಜನ್ಮ ಸ್ಥಳ:ಹಿಸಾರ್(ಹರ್ಯಾಣ)
ಎತ್ತರ: 1.65 ಮೀ.

ವಿಭಾಗ: ಬ್ಯಾಡ್ಮಿಂಟನ್

ಇವೆಂಟ್: ಮಹಿಳೆಯರ ಸಿಂಗಲ್ಸ್
ರ್ಯಾಂಕಿಂಗ್:5
ಒಲಿಂಪಿಕ್ಸ್ ಪ್ರವೇಶ 3ನೆ ಬಾರಿ
ಅತ್ಯುತ್ತಮ : 2012ರಲ್ಲಿ ಕಂಚು
 ಸ್ಪರ್ಧಾ ವೇಳಾಪಟ್ಟಿ: ಆಗಸ್ಟ್ 11 ಮತ್ತು 12ರಂದು
ಸಮಯ: ಸಂಜೆ 6 ಗಂಟೆಗೆ (ಭಾರತೀಯ ಕಾಲಮಾನ)
ಕ್ರೀಡಾಂಗಣ: ರಿಯೊ ಸೆಂಟ್ರೊ -ಪೆವಿಲಿಯನ್4

  
ಪ್ರಮುಖ ಸಾಧನೆ
*2016: ಆಸ್ಟ್ರೇಲಿಯನ್ ಸೂಪರ್ ಸಿರೀಸ್ , ಸಿಡ್ನಿ -ಚಾಂಪಿಯನ್
 *2015: ವರ್ಲ್ಡ್ ಚಾಂಪಿಯನ್‌ಶಿಪ್, ಜಕಾರ್ತ -ಬೆಳ್ಳಿ
*2015: ಆಲ್ ಇಂಗ್ಲೆಂಡ್ ಓಪನ್, ಬರ್ಮಿಂಗ್‌ಹ್ಯಾಮ್-ಎರಡನೆ ಸ್ಥಾನ.
*2015: ಇಂಡಿಯಾ ಸೂಪರ್ ಸಿರೀಸ್, ಹೊಸದಿಲ್ಲಿ-ಚಾಂಪಿಯನ್
*2014: ಚೀನಾ ಸೂಪರ್ ಸಿರೀಸ್ ಪ್ರೀಮಿಯರ್-ಚಾಂಪಿಯನ್
*2014: ಆಸ್ಟ್ರೇಲಿಯನ್ ಸೂಪರ್ ಸಿರೀಸ್- ಚಾಂಪಿಯನ್
*2014: ಏಷ್ಯನ್ ಗೇಮ್ಸ್ -ಕಂಚು (ತಂಡ).
*2012:ಡೆನ್ಮಾರ್ಕ್ ಓಪನ್ ಸೂಪರ್ ಸಿರೀಸ್, ಒಡೆನ್ಸಾ-ಚಾಂಪಿಯನ್
*2012: 30ನೆ ಒಲಿಂಪಿಕ್ಸ್ ಗೇಮ್ಸ್ , ಲಂಡನ್-ಕಂಚು
*2012: ಇಂಡೋನೇಷ್ಯಾ ಸೂಪರ್ ಸಿರೀಸ್, ಜಕಾರ್ತ-ಚಾಂಪಿಯನ್
*2012:ಸ್ವಿಸ್ ಓಪನ್, ಬಾಸೆಲ್-ಚಾಂಪಿಯನ್
*2011:ಸ್ವಿಸ್ ಓಪನ್ , ಬಾಸೆಲ್-ಚಾಂಪಿಯನ್
*2010:ಹಾಂಕಾಂಗ್ ಸೂಪರ್ ಸಿರೀಸ್, ಚಾಂಪಿಯನ್
*2010: ಕಾಮನ್‌ವೆಲ್ತ್ ಗೇಮ್ಸ್, ದಿಲ್ಲಿ- ಚಿನ್ನ
*2010: ಕಾಮನ್‌ವೆಲ್ತ್ ಗೇಮ್ಸ್, ದಿಲ್ಲಿ -ಬೆಳ್ಳಿ (ಮಿಕ್ಸಿಡ್ ಟೀಮ್)
*2010: ಬಿಡಬ್ಲುಎಫ್ ವರ್ಲ್ಡ್ ಚಾಂಪಿಯನ್‌ಶಿಪ್-ಕ್ವಾರ್ಟರ್ ಫೈನಲ್

ಪುರಸ್ಕಾರ
*2008: ಉದ ಯೋನ್ಮುಖ ಆಟಗಾರ್ತಿ
*2009: ಅರ್ಜುನ ಪ್ರಶಸ್ತಿ
*2010: ಪದ್ಮಶ್ರೀ
*2009: ರಾಜೀವ್ ಗಾಂಧಿ ಖೇಲ್‌ರತ್ನ
*2016:ಪದ್ಮಭೂಷಣ
,,,,,,,,,,,,,,,
ಶೂಟರ್ ಗಗನ್ ನಾರಂಗ್
 ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದ ಅಭಿನವ್ ಬಿಂದ್ರಾ ಲಂಡನ್ ಒಲಿಂಪಿಕ್ಸ್ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದರು. ಈ ಹಂತದಲ್ಲಿ ಗಗನ್ ನಾರಂಗ್ ಹೋರಾಟ ನಡೆಸಿ ಭಾರತದ ಖಾತೆಗೆ ಕಂಚು ಜಮೆ ಮಾಡಿದ್ದರು.ಇವರು ಲಂಡನ್ ಒಲಿಂಪಿಕ್ಸ್‌ಗೆ ಟಿಕೆಟ್ ಗಿಟ್ಟಿಸಿಕೊಂಡ ಮೊದಲ ಭಾರತೀಯ.

ಪ್ರಾಯ :33, ಜನ್ಮ ಸ್ಥಳ: ಚೆನ್ನೈ
ಎತ್ತರ: 1.8 ಮೀಟರ್
ವಿಭಾಗ: ಶೂಟಿಂಗ್
 ಇವೆಂಟ್: 10 ಏರ್ ರೈಫಲ್, 50 ಮೀ. ರೈಫಲ್ ಪ್ರೋನೆ, 50 ಮೀ. ರೈಫಲ್ 3 ಪೊಸಿಶನ್
ರ್ಯಾಂಕಿಂಗ್ :23
ಒಲಿಂಪಿಕ್ಸ್ ಪ್ರವೇಶ:3ನೆ ಬಾರಿ
ಅತ್ಯುತ್ತಮ : ಕಂಚು (2012)
 2016 ಸ್ಪರ್ಧಾ ವೇಳಾಪಟ್ಟಿ : ಆ.8, 12, 14, ಸಮಯ: 5:30 (ಐಎಸ್‌ಟಿ)
ಸ್ಥಳ : ಒಲಿಂಪಿಕ್ ಶೂಟಿಂಗ್ ಸೆಂಟರ್
  
ಪ್ರಮುಖ ಸಾಧನೆ
*2012: ಲಂಡನ್ ಒಲಿಂಪಿಕ್ಸ್ , 10 ಮೀ.ಏರ್ ರೈಫಲ್-ಕಂಚು
*2014: ಕಾಮನ್‌ವೆಲ್ತ್ ಗೇಮ್ಸ್ , 50 ಮೀ ರೈಫಲ್ ಪ್ರೋನೆ- ಬೆಳ್ಳಿ
 *2014:ಕಾಮನ್‌ವೆಲ್ತ್ ಗೇಮ್ಸ್ , 50 ಮೀ.ರೈಫಲ್ 3 ಪೊಸೀಶನ್ಸ್ -ಕಂಚು
*2010: ಕಾಮನ್‌ವೆಲ್ತ್ ಗೇಮ್ಸ್ -4 ಚಿನ್ನ

*2010: ಕಾಮನ್‌ವೆಲ್ತ್ ಗೇಮ್ಸ್ -4 ಚಿನ್ನ *2012:ಏಷ್ಯನ್ ಚಾಂಪಿಯನ್‌ಶಿಪ್, 50 ಮೀ ರೈಫಲ್ 3 ಪೊಸೀಶನ್ಸ್-ಚಿನ್ನ
*2010: ಏಷ್ಯನ್ ಗೇಮ್ಸ್, 10 ಮೀಟರ್ ಏರ್‌ರೈಫಲ್ -2 ಬೆಳ್ಳಿ
ಪುರಸ್ಕಾರ
*2011: ಪದ್ಮಶ್ರೀ
 *2010: ರಾಜೀವ್ ಗಾಂಧಿ ಖೇಲ್ ರತ್ನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News