×
Ad

ಪ್ರೊ ಕಬಡ್ಡಿ: ಇಂದು ಪಾಟ್ನಾ-ಜೈಪುರ ಫೈನಲ್

Update: 2016-07-30 23:36 IST

ಹೈದರಾಬಾದ್, ಜು.30: ಅಂಕಪಟ್ಟಿಯ ಅಗ್ರಸ್ಥಾನಿ ಪಾಟ್ನಾ ಪೈರಟ್ಸ್ ತಂಡ ರವಿವಾರ ಇಲ್ಲಿ ನಡೆಯಲಿರುವ 4ನೆ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಫೈನಲ್‌ನಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್‌ ತಂಡವನ್ನು ಎದುರಿಸಲಿದೆ.

ಶುಕ್ರವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಪುಣೇರಿ ಪಲ್ಟನ್ ತಂಡವನ್ನು 4 ಅಂಕಗಳಿಂದ ಸೋಲಿಸಿದ್ದ ಪಾಟ್ನಾ ಫೈನಲ್‌ಗೆ ತಲುಪಿತ್ತು. 2ನೆ ಸೆಮಿಫೈನಲ್‌ನಲ್ಲಿ ತೆಲುಗು ಟೈಟಾನ್ಸ್ ತಂಡವನ್ನು 10 ಅಂಕಗಳ ಅಂತರದಿಂದ ಸೋಲಿಸಿದ್ದ ಜೈಪುರ ತಂಡ ಫೈನಲ್‌ನಲ್ಲಿ ಸ್ಥಾನ ದೃಢಪಡಿಸಿತ್ತು.

ಈ ವರ್ಷ ಕಬಡ್ಡಿ ಲೀಗ್‌ನಲ್ಲಿ 14 ಪಂದ್ಯಗಳಲ್ಲಿ 10 ಗೆಲುವು ಸಾಧಿಸಿರುವ ಪಾಟ್ನಾ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿತ್ತು. ಲೀಗ್ ಹಂತದಲ್ಲಿ 14 ಪಂದ್ಯಗಳಲ್ಲಿ 8 ಜಯ ಸಾಧಿಸಿರುವ ಜೈಪುರ 3ನೆ ಸ್ಥಾನ ಪಡೆದಿತ್ತು.

ಮಹಿಳೆಯರ ಫೈನಲ್ ಪಂದ್ಯವೂ ಹೈದರಾಬಾದ್‌ನಲ್ಲಿ ಸಂಜೆ 7 ಗಂಟೆಗೆ ನಡೆಯಲಿದ್ದು, ಸ್ಟೋರ್ಮ್ ಕ್ವೀನ್ ತಂಡ ಫೈಯರ್ ಬರ್ಡ್ಸ್ ತಂಡವನ್ನು ಎದುರಿಸಲಿದೆ.

ಪಂದ್ಯ ಆರಂಭದ ಸಮಯ: ರಾತ್ರಿ 9:15

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News