×
Ad

ಸಿಮೊನಾಗೆ ಮಾಂಟ್ರಿಯಲ್ ಪ್ರಶಸ್ತಿ

Update: 2016-08-01 23:40 IST

ಮಾಂಟ್ರಿಯಲ್, ಆ.1: ವಿಶ್ವದ ನಂ.5ನೆ ರ್ಯಾಂಕಿನ ಟೆನಿಸ್ ಆಟಗಾರ್ತಿ ಸಿಮೊನಾ ಹಾಲೆಪ್ ಮಾಂಟ್ರಿಯಲ್ ಹಾರ್ಡ್‌ಕೋರ್ಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ರವಿವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ರೊಮಾನಿಯದ ಹಾಲೆಪ್ ಅಮೆರಿಕದ ಮ್ಯಾಡಿಸನ್ ಕೀಯ್ಸಾರನ್ನು 7-6(7/2), 6-3 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ 14ನೆ ಸಿಂಗಲ್ಸ್ ಕಿರೀಟವನ್ನು ಧರಿಸಿದರು.

‘‘ಇದು ನನ್ನ ಶ್ರೇಷ್ಠ ಟೆನಿಸ್ ಆಗಿರಲಿಲ್ಲ. ಏಕೆಂದರೆ ನಾನು ಶ್ರೇಷ್ಠ ಟೆನಿಸ್ ಆಡಲಿಲ್ಲ. ನಾನು ಎದುರಾಳಿಗಿಂತ ಹೆಚ್ಚು ಶಕ್ತಿಶಾಲಿ ಹೊಡೆತ ಬಾರಿಸಲು ಸಾಧ್ಯವಾಗಿಲ್ಲ’’ ಎಂದು ಹಾಲೆಪ್ ಹೇಳಿದ್ಧಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News