ಆಸ್ಟ್ರೇಲಿಯದ ಮುಖ್ಯ ಕೋಚ್ ಆಗಿ ಲೆಹ್ಮನ್ ಮುಂದುವರಿಕೆ
ಮೆಲ್ಬೋರ್ನ್, ಆ.1: ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಡ್ಯಾರೆನ್ ಲೆಹ್ಮನ್ ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ 2019ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನ ಅಂತ್ಯದ ತನಕ ಮುಂದುವರಿಯಲಿದ್ದಾರೆ. 2017ರ ಆದಿಯಲ್ಲಿ ಆಸ್ಟ್ರೇಲಿಯದ ಭಾರತ ಪ್ರವಾಸ ಲೆಹ್ಮನ್ ಎದುರಿಸಲಿರುವ ಕಠಿಣ ಸವಾಲಾಗಿದೆ.
ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿಯು ಸೋಮವಾರ 46ರ ಹರೆಯದ ಲೆಹ್ಮನ್‌ರ ಕೋಚ್ ಹುದ್ದೆಯ ಅವಧಿಯನ್ನು ಇನ್ನೂ 3 ವರ್ಷಗಳ ಅವಧಿಗೆ ವಿಸ್ತರಿಸಿತು. ಲೆಹ್ಮನ್ ಒಪ್ಪಂದದ ಅವಧಿ ಜೂ.2017ಕ್ಕೆ ಕೊನೆಗೊಳ್ಳಬೇಕಾಗಿತ್ತು.
ಲೆಹ್ಮನ್ 2013ರ ಆ್ಯಶಸ್ ಸರಣಿ ಆರಂಭವಾಗುವ 3 ತಿಂಗಳ ಮೊದಲು ಮಿಕಿ ಆರ್ಥರ್ ಬದಲಿಗೆ ಆಸೀಸ್ ತಂಡದ ಕೋಚ್ ಆಗಿ ಆಯ್ಕೆಯಾಗಿದ್ದರು. ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯ 3-0 ಅಂತರದಿಂದ ಸೋತಿತ್ತು. ಆ ಬಳಿಕ ಲೆಹ್ಮನ್ ಕೋಚಿಂಗ್‌ನಲ್ಲಿ ಭಾರೀ ಯಶಸ್ಸು ಸಾಧಿಸಿತ್ತು.
ಲೆಹ್ಮನ್ ಕೋಚ್ ಆದ ಬಳಿಕ ಆಸ್ಟ್ರೇಲಿಯ ಏಕದಿನ ಹಾಗೂ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ವಿಶ್ವದ ನಂ.1 ತಂಡ ಎನಿಸಿಕೊಂಡಿತು. ಸ್ವದೇಶದಲ್ಲಿ ನಡೆದ ಆ್ಯಶಸ್ ಸರಣಿಯನ್ನು 5-0 ಅಂತರದಿಂದಲೂ, ದಕ್ಷಿಣ ಆಫ್ರಿಕ ವಿರುದ್ ಸ್ಟ್ ಸರಣಿಯನ್ನು ಜಯಿಸಿತ್ತು. 2015ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನ್ನು ಮುಡಿಗೇರಿಸಿಕೊಂಡಿತ್ತು.