ನನ್ನ ಉದ್ದೇಶ ಸಫಲವಾಗಿದೆ: ರಾಹುಲ್
Update: 2016-08-01 23:55 IST
ಕಿಂಗ್ಸ್‌ಸ್ಟನ್, ಆ.1:ವೆಸ್ಟ್‌ಇಂಡೀಸ್ ವಿರುದ್ಧದ ಎರಡನೆ ಟೆಸ್ಟ್‌ನ ಎರಡನೆ ದಿನದಾಟದಲ್ಲಿ ಧನಾತ್ಮಕ ಮನಸ್ಸಿನಲ್ಲಿ, ಆಕ್ರಮಣಕಾರಿ ಬ್ಯಾಟಿಂಗ್ ಮಾಡಬೇಕೆಂಬ ಉದ್ದೇಶವಿತ್ತು. ಆ ನಿಟ್ಟಿಯಲ್ಲಿ ಭಾಗಶಃ ಯಶಸ್ಸು ಕಂಡಿರುವೆ ಎಂದು ಶತಕವೀರ ಕೆಎಲ್ ರಾಹುಲ್ ಹೇಳಿದ್ದಾರೆ.
ನನಗೆ ಬ್ಯಾಟಿಂಗ್ ಮಾಡಲು ಅಷ್ಟೇನೂ ಕಷ್ಟವೆನಿಸಲಿಲ್ಲ. ನಾನೆದುರಿಸಿದ ಎರಡನೆ ಎಸೆತವನ್ನು ಬಾರಿಸಲು ಮುಂದಾದೆ. ನೆಟ್‌ನಲ್ಲಿ ಸಾಕಷ್ಟು ಸಮಯ ಕಳೆದಿದ್ದೆ. ನಾನು ಕಳೆದ 3-4 ತಿಂಗಳಿಂದ ಉತ್ತಮ ಫಾರ್ಮ್‌ನಲ್ಲಿದ್ದೇನೆ. ಆಕ್ರಮಣಕಾರಿ ಬ್ಯಾಟಿಂಗ್ ಮಾಡಬೇಕೆಂಬುದು ನನ್ನ ಉದ್ದೇಶವಾಗಿತ್ತು. ನಾನು ಮಾಡಿರುವ ಬ್ಯಾಟಿಂಗ್ ನನಗೆ ಖುಷಿ ನೀಡಿದೆ. ಎಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು 24ರ ಹರೆಯದ ಕರ್ನಾಟಕದ ಆಟಗಾರ ಹೇಳಿದ್ದಾರೆ.