ರಿಯೋ ಒಲಿಂಪಿಕ್ಸ್ ನಲ್ಲಿ 13ರ ಹರೆಯದ ಈಜುಗಾರ್ತಿ ನೇಪಾಳದ ಬಾಲೆ ಗೌರಿಕಾ ಸಿಂಗ್

Update: 2016-08-02 14:15 GMT

ರಿಯೋಡಿ ಜನೈರೊ, ಆ.2: ಆಕೆಗಿನ್ನೂ ಹದಿನಾಲ್ಕು ವರ್ಷ (ವಯಸ್ಸು 13 ವರ್ಷ, 255 ದಿನಗಳು) ಪೂರ್ತಿಯಾಗಿಲ್ಲ. ಆದರೆ ಆಕೆಯ ಸಾಧನೆ ದೊಡ್ಡದು. ನೇಪಾಳದ ಬಾಲೆ ಗೌರಿಕಾ ಸಿಂಗ್ ಎಂಬ ಈಜುಗಾರ್ತಿ ಮುಂಬರುವ ರಿಯೋ ಒಲಿಂಪಿಕ್ಸ್ ನಲ್ಲಿ  ಪದಕ ಬೇಟೆಗೆ ಈಜು ಕೊಳಕ್ಕೆ  ಇಳಿಯಲಿದ್ದಾರೆ. 

ಈಕೆ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುತ್ತಿರುವ ಅತ್ಯಂತ ಕಿರಿಯ ಸ್ಪರ್ಧಿ. ರವಿವಾರ ನಡೆಯಲಿರುವ  ವನಿತೆಯರ  100 ಮೀ ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಗೆ ಅವರು  ತಯಾರಿ ನಡೆಸಿದ್ದಾರೆ. 

ಈಗಾಗಲೇ ಏಳು ರಾಷ್ಟ್ರೀಯ ದಾಖಲೆಗಳನ್ನು ಮುರಿದು ತನ್ನ ಹೆಸರಲ್ಲಿ ದಾಖಲೆ ಬರೆಸಿರುವ ಗೌರಿಕಾ ಸಿಂಗ್ ಅವರು ಇನ್ನೂ ಎರಡು ವರ್ಷದ ಮಗುವಾಗಿದ್ದಾಗ ಕುಟುಂಬದೊಂದಿಗೆ ಇಂಗ್ಲೆಂಡ್‌ಗೆ ತೆರಳಿದ್ದರು. ಅಲ್ಲೆ ಬೆಳೆದಿದ್ದ ಗೌರಿಕಾ ಸಿಂಗ್  ತವರಿಗೆ ಮತ್ತೆ ಮರಳಿದಾಗ ಭೂಕಂಪದಿಂದ ತತ್ತರಿಸಿದ ನೇಪಾಳದ ದರ್ಶನವಾಗಿತ್ತು. ಅವರ ತಂದೆ ನೇಪಾಳದಲ್ಲಿ  ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ತಾಯಿ ಅರಿಮಾ ಹಾಗೂ ಸಹೋದರ ಸುರೇನ್  ಜತೆ ಕಠ್ಮಂಡುವಿನಲ್ಲಿ ನೆಲೆಸಿರುವ ಗೌರಿಕಾ ದೊಡ್ಡ ಸಾಧನೆಯ ಯೋಜನೆಯಲ್ಲಿದ್ದಾರೆ..

ಗೌರಿಕಾ  100 ಮೀ ಬ್ಯಾಕ್​ಸ್ಟ್ರೋಕ್​ನಲ್ಲಿ ರಶ್ಯ  ಹಾಗೂ ಕಝಾನದಲ್ಲಿ ನಡೆದ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಪದಕ ಪಡೆದ್ದಾರೆ. ಕಳೆದ ಫೆಬ್ರವರಿಯಲ್ಲಿ ಭಾರತದಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಬೆಳ್ಳಿ  ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News