×
Ad

ಎರಡನೆ ಟೆಸ್ಟ್: ತಿರುಗೇಟು ನೀಡಿದ ವೆಸ್ಟ್‌ಇಂಡೀಸ್

Update: 2016-08-03 23:23 IST

 ಕಿಂಗ್ಸ್‌ಸ್ಟನ್, ಆ.3: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಬ್ಲಾಕ್‌ವುಡ್(63) ಹಾಗೂ ರಾಸ್ಟನ್ ಚೇಸ್(ಔಟಾಗದೆ 70) ಅರ್ಧಶತಕದ ಕೊಡುಗೆಯ ನೆರವಿನಿಂದ ವೆಸ್ಟ್‌ಇಂಡೀಸ್ ತಂಡ 2ನೆ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ತಿರುಗೇಟು ನೀಡಿದೆ. ಪಂದ್ಯವನ್ನು ಡ್ರಾಗೊಳಿಸುವತ್ತ ಚಿತ್ತವಿರಿಸಿದೆ.

5ನೆ ಹಾಗೂ ಅಂತಿಮ ದಿನದಾಟವಾದ ಬುಧವಾರ 4 ವಿಕೆಟ್‌ಗೆ 48 ರನ್‌ನಿಂದ 2ನೆ ಇನಿಂಗ್ಸ್ ಮುಂದುವರಿಸಿದ ವಿಂಡೀಸ್ ಭೋಜನ ವಿರಾಮದ ವೇಳೆಗೆ 5 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿದೆ. ಚೇಸ್ ಹಾಗೂ ಡೌರಿಚ್(ಔಟಾಗದೆ 33)6ನೆ ವಿಕೆಟ್‌ಗೆ 76 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದ್ದಾರೆ.

 ಬ್ಲಾಕ್‌ವುಡ್ ಹಾಗೂ ಚೇಸ್ 5ನೆ ವಿಕೆಟ್‌ಗೆ 93 ರನ್ ಸೇರಿಸಿ ಇನಿಂಗ್ಸ್ ರಿಪೇರಿ ಮಾಡಿದರು. ಮಂಗಳವಾರ ಇಲ್ಲಿನ ಸಬೀನಾ ಪಾರ್ಕ್‌ನಲ್ಲಿ ನಡೆದ 4ನೆ ದಿನದಾಟವೂ ಮಳೆಯಿಂದಾಗಿ ಬೇಗನೆ ಕೊನೆಗೊಂಡಿದ್ದು, ಕೇವಲ 15.5 ಓವರ್‌ಗಳ ಪಂದ್ಯ ಮಾತ್ರ ಆಡಲು ಸಾಧ್ಯವಾಗಿದೆ. ವಿಂಡೀಸ್ 48 ರನ್‌ಗೆ 4 ವಿಕೆಟ್ ಕಳೆದುಕೊಂಡಿತ್ತು.

ಆರಂಭಿಕ ಆಟಗಾರ ಬ್ರಾಥ್‌ವೈಟ್(23) ಹಾಗೂ ಡರೆನ್ ಬ್ರಾವೊ(20) ಎರಡಂಕೆ ದಾಟಿದರು. ತಂಡದ ಅನುಭವಿ ಆಟಗಾರ ಮರ್ಲಾನ್ ಸ್ಯಾಮುಯೆಲ್ಸ್ ಖಾತೆ ತೆರೆಯುವ ಮೊದಲೇ ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿಗೆ ಕ್ಲೀನ್ ಬೌಲ್ಡಾದರು.

 ಭಾರತದ ಪರ ವೇಗದ ಬೌಲರ್ ಮುಹಮ್ಮದ್ ಶಮಿ(2-53) ಯಶಸ್ವಿ ಬೌಲರ್ ಎನಿಸಿಕೊಂಡರು.

ಸ್ಕೋರ್ ವಿವರ

ವೆಸ್ಟ್‌ಇಂಡೀಸ್ ಪ್ರಥಮ ಇನಿಂಗ್ಸ್: 196 ರನ್‌ಗೆ ಆಲೌಟ್

ಭಾರತ ಪ್ರಥಮ ಇನಿಂಗ್ಸ್: 500/9 ಡಿಕ್ಲೇರ್

ವೆಸ್ಟ್‌ಇಂಡೀಸ್ ಎರಡನೆ ಇನಿಂಗ್ಸ್:

54 ಓವರ್‌ಗಳಲ್ಲಿ 215/5

ಬ್ರಾಥ್‌ವೈಟ್ ಸಿ ರಾಹುಲ್ ಬಿ ಮಿಶ್ರಾ 23

ಚಂದ್ರಿಕ ಬಿ ಶರ್ಮ 01

ಡರೆನ್ ಬ್ರಾವೊ ಸಿ ರಾಹುಲ್ ಬಿ ಶಮಿ 20

ಸ್ಯಾಮುಯೆಲ್ಸ್ ಬಿ ಶಮಿ 00

ಬ್ಲಾಕ್‌ವುಡ್ ಸಿ ಪೂಜಾರ ಬಿ ಅಶ್ವಿನ್ 63

ಚೇಸ್ ಔಟಾಗದೆ 70

ಡೌರಿಚ್ ಔಟಾಗದೆ 33

ಇತರ 05

ವಿಕೆಟ್ ಪತನ: 1-5, 2-41, 3-41, 4-48, 5-141.

ಬೌಲಿಂಗ್ ವಿವರ

ಇಶಾಂತ್ ಶರ್ಮ 10-1-34-1

ಮುಹಮ್ಮದ್ ಶಮಿ 13-3-53-2

ಅಮಿತ್ ಮಿಶ್ರಾ 11-1-56-1

ಯಾದವ್ 6-1-21-0

ಆರ್.ಅಶ್ವಿನ್ 14-3-49-1.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News