ವಿಶ್ವ ಬಾಕ್ಸಿಂಗ್ ರ್ಯಾಂಕಿಂಗ್: ವಿಜೇಂದರ್‌ಗೆ 10ನೆ ಸ್ಥಾನ

Update: 2016-08-03 17:56 GMT

ಹೊಸದಿಲ್ಲಿ, ಆ.3: ಭಾರತದ ಬಾಕ್ಸಿಂಗ್ ಸ್ಟಾರ್ ವಿಜೇಂದರ್ ಸಿಂಗ್ ವಿಶ್ವ ಬಾಕ್ಸಿಂಗ್ ಸಂಘಟನೆ(ಡಬ್ಲುಬಿಒ) ಬುಧವಾರ ಬಿಡುಗಡೆ ಮಾಡಿರುವ ರ್ಯಾಂಕಿಂಗ್‌ನಲ್ಲಿ 10ನೆ ಸ್ಥಾನ ಪಡೆದಿದ್ಧಾರೆ.

ಕಳೆದ ತಿಂಗಳು ಏಷ್ಯ ಪೆಸಿಫಿಕ್ ಸೂಪರ್ ಮಿಡ್ಲ್‌ವೇಟ್ ಚಾಂಪಿಯನ್ ಕಿರೀಟ ಧರಿಸಿರುವ ಕಾರಣ ವಿಜೇಂದರ್ ರ್ಯಾಂಕಿಂಗ್‌ನಲ್ಲಿ ಭಡ್ತಿ ಪಡೆದಿದ್ದಾರೆ.

ಹೊಸದಿಲ್ಲಿಯಲ್ಲಿ ನಡೆದಿದ್ದ 10 ಸುತ್ತಿನ ಪಂದ್ಯದಲ್ಲಿ ಡಬ್ಲ್ಯುಬಿಸಿ ಯುರೋಪಿಯನ್ ಚಾಂಪಿಯನ್ ಕೆರ್ರಿ ಹೋಪ್‌ರನ್ನು ಮಣಿಸುವುದರೊಂದಿಗೆ ಪ್ರಶಸ್ತಿ ಜಯಿಸಿದ್ದರು. ಇದು ವಿಜೇಂದರ್ ದಾಖಲಿಸಿದ್ದ ಸತತ 7ನೆ ಗೆಲುವಾಗಿತ್ತು.

 ‘‘ಇದು ಆರಂಭ ಮಾತ್ರ. ಮುಂದೊಂದು ದಿನ ವಿಶ್ವದ ನಂ.1 ಬಾಕ್ಸರ್ ಆಗುವೆ. ಇದು ನನ್ನ ಕನಸಾಗಿದೆ. ಆ ಸಾಧನೆ ಮಾಡುವ ಬಗ್ಗೆ ವಿಶ್ವಾಸವಿದೆ’’ ಎಂದು ಅಮೆಚೂರ್ ಬಾಕ್ಸರ್ ಆಗಿದ್ದಾಗ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸಿದ್ದ ಭಾರತದ ಮೊದಲ ಬಾಕ್ಸಿಂಗ್ ಪಟು ಎನಿಸಿಕೊಂಡಿದ್ದ ವಿಜೇಂದರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News