ಕ್ರೀಡಾಗ್ರಾಮದ ಸ್ವಾಗತ ಸಮಾರಂಭಕ್ಕೆ ಸಾಕ್ಷಿಯಾದ ಭಾರತೀಯ ಅಥ್ಲೀಟ್‌ಗಳು
ರಿಯೋ ಡಿ ಜನೈರೊ, ಆ.3: ರಿಯೋ ಗೇಮ್ಸ್‌ನ ಕ್ರೀಡಾ ಗ್ರಾಮದಲ್ಲಿ ನಡೆದ ಸ್ವಾಗತ ಸಮಾರಂಭದಲ್ಲಿ ಭಾರತದ ಅರ್ಧದಷ್ಟು ಅಥ್ಲೀಟ್‌ಗಳು ಭಾಗವಹಿಸಿದರು. ಸುಮಾರು 45 ನಿಮಿಷಗಳ ಕಾಲ ನಡೆದ ಸಮಾರಂಭದಲ್ಲಿ ಅಥ್ಲೀಟ್‌ಗಳಲ್ಲದೆ, ಭಾರತೀಯ ಒಲಿಂಪಿಕ್ ಅಸೋಸಿಯೇಶನ್(ಐಒಎ) ಅಧ್ಯಕ್ಷ ಎನ್. ರಾಮಚಂದ್ರನ್ ಹಾಗೂ ಚೀಫ್ ಡಿ ಮಿಶನ್ ರಾಕೇಶ್ ಗುಪ್ತಾ ಕ್ರೀಡಾ ಗ್ರಾಮದ ಮೇಯರ್‌ಗೆ ಬೆಳ್ಳಿಯ ಆನೆ ಹಾಗೂ ಸ್ವರ್ಣಲೇಪಿತ ನವಿಲಿನ ವಿಗ್ರಹವನ್ನು ಉಡುಗೊರೆಯಾಗಿ ನೀಡಿದರು. ಸ್ವಾಗತ ಸಮಾರಂಭದಲ್ಲಿ ಪ್ರತಿ ದೇಶದ ಧ್ವಜವನ್ನು ಹಾರಿಸಿ, ರಾಷ್ಟ್ರಗೀತೆಯನ್ನು ನುಡಿಸಲಾಯಿತು.
ಸಮಾರಂಭದಲ್ಲಿ ಶೂಟರ್‌ಗಳಾದ ಜಿತು ರಾಯ್, ಪ್ರಕಾಶ್ ನಂಜಪ್ಪ, ಗುರುಪ್ರೀತ್ ಸಿಂಗ್, ಚೈನ್ ಸಿಂಗ್, ಅಥ್ಲೀಟ್‌ಗಳಾದ ಖುಶ್ಬೀರ್ ಕೌರ್, ಮನ್‌ಪ್ರೀತ್ ಕೌರ್, ಮಹಿಳಾ ಹಾಕಿ ತಂಡ, ಸ್ವಿಮ್ಮರ್‌ಗಳಾದ ಸಾಜನ್ ಪ್ರಕಾಶ್ ಹಾಗೂ ಶಿವಾನಿ ಕಟಾರಿಯಾ, ಕೆಲವು ಕೋಚ್‌ಗಳು ಹಾಗೂ ಅಧಿಕಾರಿಗಳಿದ್ದರು.
ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ 31 ಕಟ್ಟಡಗಳಿವೆ. ಇದರಲ್ಲಿ 3,604 ಅಪಾರ್ಟ್‌ಮೆಂಟ್‌ಗಳಿವೆ. 17,000ಕ್ಕೂ ಅಧಿಕ ಅಥ್ಲೀಟ್‌ಗಳು ಹಾಗು ಅಧಿಕಾರಿಗಳು ಕ್ರೀಡಾಗ್ರಾಮದಲ್ಲಿ ಆತಿಥ್ಯ ಪಡೆಯುವ ಸಾಧ್ಯತೆಯಿದೆ.