×
Ad

ಒಲಿಂಪಿಕ್ಸ್‌ನಲ್ಲಿ ರೈಲ್ವೆಯ 35 ಅಥ್ಲೀಟ್‌ಗಳು ಭಾಗಿ

Update: 2016-08-03 23:31 IST

ಹೊಸದಿಲ್ಲಿ, ಆ.3: ರಿಯೋ ಒಲಿಂಪಿಕ್ ಗೇಮ್ಸ್‌ನಲ್ಲಿ ರೈಲ್ವೆಯ ಸುಮಾರು 35 ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಆಗಸ್ಟ್ 5 ರಿಂದ 21ರ ತನಕ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಭಾರತದ ಅಥ್ಲೀಟ್‌ಗಳ ತಂಡದಲ್ಲಿ ಮೂರನೆ ಒಂದರಷ್ಟು ಅಥ್ಲೀಟ್‌ಗಳು ರೈಲ್ವೇಸ್‌ಗೆ ಸೇರಿದ್ದಾರೆ. ಹಾಕಿ, ಆರ್ಚರಿ, ಅಥ್ಲೆಟಿಕ್ಸ್, ಬಾಕ್ಸಿಂಗ್, ಶೂಟಿಂಗ್, ಕುಸ್ತಿ, ಸ್ವಿಮ್ಮಿಂಗ್ ಹಾಗೂ ವೇಟ್‌ಲಿಪ್ಟಿಂಗ್‌ನಲ್ಲಿ ರೈಲ್ವೇಸ್‌ನ ಕ್ರೀಡಾಳು ಸ್ಪರ್ಧಿಸಲಿದ್ದಾರೆ.

ಭಾರತದ ಮಹಿಳಾ ಹಾಕಿ ತಂಡ ಹಾಗೂ ವೇಟ್‌ಲಿಫ್ಟಿಂಗ್ ತಂಡಗಳಿರುವ ಆಟಗಾರರು ರೈಲ್ವೇಸ್‌ಗೆ ಸೇರಿದವರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ರೈಲ್ವೇಸ್‌ನ 12 ಕ್ರೀಡಾಪಟುಗಳಿದ್ದರು. 121 ಸದಸ್ಯರನ್ನು ಒಳಗೊಂಡ ರಿಯೋ ಒಲಿಂಪಿಕ್ ಗೇಮ್ಸ್‌ನಲ್ಲಿ ರೈಲ್ವೇಸ್‌ನ 35ಕ್ಕೂ ಅಧಿಕ ಅಥ್ಲೀಟ್‌ಗಳು ಸ್ಪರ್ಧಿಸುತ್ತಿದ್ದಾರೆ. ಇದು ರೈಲ್ವೇಸ್ ಭಾರತದಲ್ಲಿ ಕ್ರೀಡೆಗೆ ನೀಡುತ್ತಿರುವ ಉತ್ತೇಜನದ ಸಂಕೇತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News