ಸೋಮನ್ ಮ್ಯಾರಥಾನ್ ಓಟಕ್ಕೆ ತಾಯಿ ಉಷಾ ಸಾಥ್!
ಮುಂಬೈ, ಆ.4: ದೇಶದ ಮ್ಯಾರಥಾನ್ ಓಟದ ಪೋಸ್ಟರ್ ಬಾಯ್ ಎನಿಸಿಕೊಂಡಿರುವ ಮಿಲಿಂದ್ ಸೋಮನ್ ಅಹ್ಮದಾಬಾದ್‌ನಿಂದ ಮುಂಬೈ ತನಕ ‘ದಿ ಗ್ರೇಟ್ ಇಂಡಿಯಾ ರನ್’ನ್ನು ಕೇವಲ 8 ದಿನಗಳಲ್ಲಿ ಪೂರ್ಣಗೊಳಿಸಿದ್ದಾರೆ. ವಿಶೇಷವೆಂದರೆ ಮಿಲಿಂದ್‌ರ ಮ್ಯಾರಥಾನ್ ಓಟದ ನಡುವೆ ಓರ್ವ ವ್ಯಕ್ತಿ ಸೇರ್ಪಡೆಯಾಗಿ ಎಲ್ಲರನ್ನು ಅಚ್ಚರಿ ಮೂಡಿಸಿದ್ದರು.
78ರ ಹರೆಯದ ಉಷಾ ಸೋಮನ್ ಮಗ ಸೋಮನ್ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದರು. ಆಗಸ್ಟ್ 3 ರಂದು ಬಿಡುಗಡೆಯಾದ ವಿಡಿಯೋದಲ್ಲಿ ಉಷಾ ಸೋಮನ್ ಅವರು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮನೋರ್ ಸಮೀಪ ಮಗ ಮಿಲಿಂದ್‌ರ ಮ್ಯಾರಥಾನ್ ಓಟದಲ್ಲಿ ಜೊತೆಯಾಗಿರುವುದು ಕಂಡು ಬಂದಿದೆ. ಉಷಾ ಸೀರೆ ಧರಿಸಿ ಬರಿಗಾಲಲ್ಲಿ ಮಗನೊಂದಿಗೆ ಓಟ ಬೆಳೆಸಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಮೂಲಕ ವಯಸ್ಸು ಒಂದು ಸಂಖ್ಯೆ ಮಾತ್ರ ಎಂದು ತೋರಿಸಿಕೊಟ್ಟಿದ್ದಾರೆ.
ಉಷಾ ಸೋಮನ್ ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲಲ್ಲ. ಉಷಾ ಅವರು ಈ ಹಿಂದೆ ಹಲವಾರು 100 ಕಿ.ಮೀ. ವಾಕ್‌ನಲ್ಲಿ ಭಾಗವಹಿಸಿದ್ದಾರೆ. 2014ರಲ್ಲಿ ನಿಧಿ ಸಂಗ್ರಹಿಸುವ ಉದ್ದೇಶದಿಂದ 100 ಕಿ.ಮೀ.ದೂರವನ್ನು 48 ಗಂಟೆಯೊಳಗೆ ಬರಿಗಾಲಲ್ಲಿ ಕ್ರಮಿಸಿದ್ದರು.
‘ತಾಯಿಯಂತೆಯೇ ಮಗ’ ಎನ್ನುವ ಮಾತಿಗೆ ಮಿಲಿಂದ್ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಮಿಲಿಂದ್ ಸೋಮನ್ ಮೂರನೆ ಬಾರಿ ‘ಅಹ್ಮದಾಬಾದ್‌ನಿಂದ ಮುಂಬೈಗೆ ಓಟ’ದ ಅಭಿಯಾನದಲ್ಲಿ ಭಾಗವಹಿಸಿದ್ದಾರೆ.