×
Ad

ಇಂಗ್ಲೆಂಡ್ ವಿರುದ್ಧ 3ನೆ ಟೆಸ್ಟ್: ಅಲಿ ಶತಕ, ಸುಸ್ಥಿತಿಯಲ್ಲಿ ಪಾಕಿಸ್ತಾನ

Update: 2016-08-04 23:32 IST

ಬರ್ಮಿಂಗ್‌ಹ್ಯಾಮ್, ಆ.4: ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಅಝರ್ ಅಲಿ(139) ಹಾಗೂ ಸಮಿ ಅಸ್ಲಾಂ(82) 2ನೆ ವಿಕೆಟ್‌ಗೆ ಸೇರಿಸಿದ 181 ರನ್ ಜೊತೆಯಾಟದ ನೆರವಿನಿಂದ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧದ ಮೂರನೆ ಟೆಸ್ಟ್‌ನಲ್ಲಿ ಸುಸ್ಥಿತಿಯಲ್ಲಿದೆ.

ಇಂಗ್ಲೆಂಡ್‌ನ್ನು ಮೊದಲ ಇನಿಂಗ್ಸ್‌ನಲ್ಲಿ 297 ರನ್‌ಗೆ ಆಲೌಟ್ ಮಾಡಿ ಗುರುವಾರ ಮೊದಲ ಇನಿಂಗ್ಸ್ ಆರಂಭಿಸಿದ ಪಾಕ್ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 257 ರನ್ ಗಳಿಸಿದೆ.

ಶತಕವೀರ ಅಲಿ(139 ರನ್, 294 ಎಸೆತ, 15 ಬೌಂಡರಿ, 1 ಸಿಕ್ಸರ್)ದಿನದಾಟದ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಮುಹ್ಮಮದ್ ಹಫೀಝ್(0) ಬೇಗನೆ ಔಟಾದಾಗ ಅಸ್ಲಾಂರೊಂದಿಗೆ 2ನೆ ವಿಕೆಟ್‌ಗೆ 181 ರನ್ ಸೇರಿಸಿ ತಂಡವನ್ನು ಆಧರಿಸಿದ ಅಲಿ ಹಿರಿಯ ಬ್ಯಾಟ್ಸ್‌ಮನ್ ಯೂನಿಸ್ ಖಾನ್‌ರೊಂದಿಗೆ 3ನೆ ವಿಕೆಟ್‌ಗೆ 76 ರನ್ ಜೊತೆಯಾಟ ನಡೆಸಿದರು.

ಯೂನಿಸ್‌ಖಾನ್ ಔಟಾಗದೆ 21 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News