×
Ad

ಪಾಕಿಸ್ತಾನಿ ಶೂಟರ್‌ಗೆ ನೆರವಾದ ಮಿಲಿಟರಿ ತರಬೇತಿ

Update: 2016-08-04 23:52 IST

 ಇಸ್ಲಾಮಾಬಾದ್, ಆ.4: ರಿಯೋ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಕೇವಲ ಇಬ್ಬರು ಶೂಟರ್‌ಗಳು ಭಾಗವಹಿಸುತ್ತಿದ್ದಾರೆ. ಶೂಟರ್‌ಗಳು ದೇಶದ ಮಿಲಿಟರಿ ಕ್ಯಾಂಪ್‌ನಲ್ಲಿ ವಿಶೇಷ ತರಬೇತಿಯನ್ನೂ ಪಡೆದಿದ್ದಾರೆ.

ನೌಕಾಪಡೆಯ ಸಿಬ್ಬಂದಿ ಗುಲಾಂ ಮುಸ್ತಫಾ ಬಶೀರ್ ಹಾಗೂ ಯುನಿವರ್ಸಿಟಿ ವಿದ್ಯಾರ್ಥಿನಿ ಮಿನ್ಹಾಲ್ ಸೊಹೈಲ್ ಒಲಿಂಪಿಕ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ.

 ಬಶೀರ್ ಪುರುಷರ 25 ಮೀ. ರ್ಯಾಪಿಡ್ ಫೈಯರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಹಾಗೂ ಸೊಹೈಲ್ ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಪಾಕ್‌ನ್ನು ಪ್ರತಿನಿಧಿಸಲಿದ್ದಾರೆ.

 ಪಾಕಿಸ್ತಾನದ ನೌಕಾಪಡೆಯಲ್ಲಿ ತರಬೇತಿ ಪಡೆದಿರುವ ಈ ಇಬ್ಬರು ಶಾರ್ಪ್ ಶೂಟರ್‌ಗಳಾಗಿದ್ದು, ಸೊಹೈಲ್ ನೌಕಾಧಿಕಾರಿಯೊಬ್ಬರ ಪುತ್ರಿಯಾಗಿದ್ದಾರೆ. ಸೊಹೈಲ್ ತವರುಪಟ್ಟಣ ಕರಾಚಿಯ ನೌಕಾನೆಲೆಯ ಬೇಸಿಗೆ ಶಿಬಿರದಲ್ಲಿ ಶೂಟಿಂಗ್ ಅಭ್ಯಾಸವನ್ನು ಆರಂಭಿಸಿದ್ದು, ಹಲವಾರು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಾರೆ. ಬಶೀರ್ 2010ರಲ್ಲಿ ನೌಕಾಪಡೆಗೆ ಸೇರಿದ ಬಳಿಕ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು. ಪಾಕ್‌ನಲ್ಲಿ ಶೂಟಿಂಗ್ ಅಭಿವೃದ್ದಿಗೆ ಭಾರೀ ಪ್ರಯತ್ನಪಡುತ್ತಿದೆ ಎಂದು ಬಶೀರ್ ಹೇಳಿದ್ದಾರೆ.

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಕೇವಲ 7 ಅಥ್ಲೀಟ್‌ಗಳು ಪಾಕ್‌ನ್ನು ಪ್ರತಿನಿಧಿಸುತ್ತಿದ್ದಾರೆ. ಎಲ್ಲರಿಗೂ ವೈಲ್ಡ್‌ಕಾರ್ಡ್ ಪ್ರವೇಶ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News