ರಿಯೋ ಒಲಿಂಪಿಕ್ಸ್ ಚಾಲನಾ ಸಮಾರಂಭದ ವೀಡಿಯೊ ಶೇರ್ ಮಾಡಿ, ತನ್ನ ದಾಖಲೆ ಕುರಿತು ವಿವರಿಸಿದ ಲಿಯಾಂಡರ್ ಪೇಸ್!
ರಿಯೋ ಡಿಜನೈರೊ, ಆಗಸ್ಟ್ 6: ಟೆನಿಸ್ ಸ್ಟಾರ್ ಲಿಯಾಂಡರ್‌ಪೇಸ್ ಒಲಿಂಪಿಕ್ಸ್ ಚಾಲನಾ ಸಮಾರಂಭದ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಪಂದ್ಯಗಳು ಆರಂಭಗೊಳ್ಳುವ ಮೊದಲು ಅವರ ಮೂಲಕ ಸೃಷ್ಟಿಯಾದ ದಾಖಲೆಯೊಂದನ್ನು ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ.. ಲಿಯಾಂಡರ್ ಪೇಸ್ ಭಾರತವನ್ನುಒಲಿಂಪಿಕ್ಸ್‌ನಲ್ಲಿ ಏಳನೇ ಬಾರಿ ಪ್ರತಿನಿಧಿಸುತ್ತಿರುವುದು ಒಂದು ದಾಖಲೆಯಾಗಿದೆ. ಈ ಸಾಧನೆಗಾಗಿ ಸಂಭ್ರಮ ವ್ಯಕ್ತಪಡಿಸಿರುವ ಅವರು ವೀಡಿಯೊವನ್ನು ಶೇರ್ ಮಾಡಿದ್ದಲ್ಲದೆ, " ಇಲ್ಲಿನ ವಾತಾವರಣ ನಿಜಕ್ಕೂ ಅದ್ಭುತವಾಗಿದೆ. ಹೆಚ್ಚು ಸಂತಸದ ವಿಚಾರವೆಂದರೆ ಭಾರತವನ್ನು ಏಳನೆ ಬಾರಿ ಪ್ರತಿನಿಧಿಸಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದೇನೆ. ಎಲ್ಲರಿಗೂಶುಭಕಾಮನೆಗಳು. ನಾವೆಲ್ಲರೂ ಸೇರಿ ಈ ದಾಖಲೆಯನ್ನು ಮಾಡಿದ್ದೇವೆ" ಎಂದು ತಿಳಿಸಿದ್ದಾರೆಂದುವರದಿಯಾಗಿದೆ.
ಶೂಟಿಂಗ್ ಕ್ರೀಡಾಪಟು ಅಭಿನವ್ ಬಿಂದ್ರಾ ಭಾರತೀಯ ತಂಡದ ನೇತೃತ್ವವನ್ನು ವಹಿಸಿದ್ದು ಬಿಂದ್ರಾರ ಕೈಯಲ್ಲಿ ದೊಡ್ಡದಾಗ ತ್ರಿವರ್ಣ ಧ್ವಜವಿತ್ತು. ಒಲಿಂಪಿಕ್ಸ್‌ಗೆ ಹೋಗುವ ಮೊದಲು ಪೇಸ್ ಮತ್ತು ಬೋಪಣ್ಣರ ನಡುವೆ ವಿವಾದ ನಡೆದಿತ್ತು. ಇದು ರಿಯೋ ತಲುಪಿದ ಮೇಲೆಯೂ ಕೊನೆಗೊಂಡಿಲ್ಲ ಎನ್ನಲಾಗಿದೆ. ಅಲ್ಲಿಹೋದ ಬಳಿಕ ಪೇಸ್ ರೋಹನ್‌ರ ಜೊತೆ ಕೋಣೆ ಹಂಚಿಕೊಳ್ಳಲು ನಿರಾಕರಿಸಿದ್ದಾರೆ.ಲಿಯಾಂಡರ್ ಮತ್ತು ರೋಹನ್ ಬೋಪಣ್ಣರ ಮೊದಲಪಂದ್ಯ ಪೊಲೇಂಡ್‌ನ ಜೋಡಿಯಾದ ಲುಕಾರ್ ಕೂಬಟ್‌ಮತ್ತು ಮಾರ್ಕಿನ್‌ಮಟ್‌ಕೋವಸ್ಕಿನಡುವೆ ಶನಿವಾರ ಸಂಜೆ 7:30ಕ್ಕೆ ಕೋರ್ಟ್ 5ರಲ್ಲಿ ನಡೆಯಲಿದೆ ಎಂದು ವರದಿ ತಿಳಿಸಿದೆ.
ದಕ್ಷಿಣ ಅಮೆರಿಕನ್ ರಾಷ್ಟ್ರವೊಂದು ಒಲಿಂಪಿಕ್ಸ್ ಕ್ರೀಡಾಕೂಟದ ಉಸ್ತುವಾರಿಯನ್ನು ಮೊದಲ ಬಾರಿ ವಹಿಸಿಕೊಂಡಿದ್ದು, ಒಲಿಂಪಿಕ್ಸ್‌ನಲ್ಲಿ 205 ದೇಶಗಳ ಹತ್ತು ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಭಾರತದಿಂದ 118 ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.