ಅಮೆರಿಕದ ಮಹಿಳಾ ಶೂಟರ್ ವರ್ಜಿನಿಯಾಗೆ ರಿಯೋ ಒಲಿಂಪಿಕ್ಸ್‌ನ ಮೊದಲ ಚಿನ್ನ
Update: 2016-08-06 21:20 IST
ರಿಯೋ ಡಿ ಜನೈರೊ, ಆ.6: ಅಮೆರಿಕದ ಯುವ ಮಹಿಳಾ ಶೂಟರ್ ವರ್ಜಿನಿಯಾ ಥ್ರಾಶರ್ ರಿಯೋ ಒಲಿಂಪಿಕ್ಸ್‌ನ ಮೊದಲ ಚಿನ್ನ ಬಾಚಿಕೊಂಡಿದ್ದಾರೆ.
19ರ ಹರೆಯದ ವರ್ಜಿನಿಯಾ ಅವರು ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚೀನಾದ ಶೂಟರ್‌ಗಳನ್ನು ಹಿಂದಿಕ್ಕಿ ಚಿನ್ನಕ್ಕೆ ಮುತ್ತಿಟ್ಟರು.ಅಥೆನ್ಸ್ ಒಲಿಂಪಿಕ್ಸ್ ಚಾಂಪಿಯನ್ ಚೀನಾ ಡು ಲಿ ಅವರು ಬೆಳ್ಳಿ ಮತ್ತು 2012ರ ಲಂಡನ್ ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಯಿ ಸಿಲೀಂಗ್ ಕಂಚು ಪಡೆದರು.