ಮೊದಲ ಸುತ್ತಿನಲ್ಲೆ ಮುಗ್ಗರಿಸಿದ ಪೇಸ್-ಬೋಪಣ್ಣ
ರಿಯೊ ಡಿ ಜನೈರೊ, ಆ.6: ಭಾರತದ ಡಬಲ್ಸ್ ಆಟಗಾರರಾದ ಲಿಯಾಂಡರ್ ಪೇಸ್ ಹಾಗೂ ರೋಹನ್ ಬೋಪಣ್ಣ ರಿಯೋ ಒಲಿಂಪಿಕ್ಸ್‌ನ ಮೊದಲ ಸುತ್ತಿನಲ್ಲಿ ಸೋಲುವ ಮೂಲಕ ಟೂರ್ನಿಯಿಂದ ಹೊರ ನಡೆದಿದ್ದಾರೆ.2ನೆ ಒಲಿಂಪಿಕ್ ಪದಕ ಗೆಲ್ಲುವ ಪೇಸ್ ಕನಸು ಭಗ್ನಗೊಂಡಿದೆ.
ಶನಿವಾರ ಇಲ್ಲಿ ನಡೆದ ಪುರುಷರ ಡಬಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಪೇಸ್-ಬೋಪಣ್ಣ ಪೊಲೆಂಡ್‌ನ ಲೂಕಾಸ್ ಕುಬಟ್ ಹಾಗೂ ಮಾರ್ಸಿನ್ ಮಟ್ಕೊವಿಸ್ಕಿ ವಿರುದ್ಧ 4-6, 6-7(6-8) ನೇರ ಸೆಟ್‌ಗಳಿಂದ ಸೋತು ಭಾರೀ ನಿರಾಸೆಗೊಳಿಸಿದರು.
ದಾಖಲೆ ಏಳನೆ ಹಾಗೂ ಕೊನೆಯ ಒಲಿಂಪಿಕ್ಸ್‌ನಲ್ಲಿ ಆಡಿದ ಪೇಸ್ ಮೊದಲ ಸುತ್ತಿನಲ್ಲಿ ಹೊರ ಸೋತು ನಿರಾಸೆ ಅನುಭವಿಸಿದರು. ಪೇಸ್ 1996ರ ಅಟ್ಲಾಂಟ ಗೇಮ್ಸ್‌ನಲ್ಲಿ ಕಂಚು ಗೆದ್ದುಕೊಂಡಿದ್ದರು.
ಒಲಿಂಪಿಕ್ಸ್ ಆರಂಭಕ್ಕೆ ಮೊದಲು ಈ ಇಬ್ಬರು ಆಟಗಾರರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ತಡವಾಗಿ ರಿಯೋಗೆ ತಲುಪಿದ್ದ ಪೇಸ್ ಅವರು ಬೋಪಣ್ಣರೊಂದಿಗೆ ಅಭ್ಯಾಸವನ್ನು ನಡೆಸಿರಲಿಲ್ಲ.
ಶನಿವಾರ ಇಲ್ಲಿ ನಡೆದ ಡಬಲ್ಸ್ ಪಂದ್ಯದಲ್ಲೂ ಈ ಇಬ್ಬರ ನಡುವಿನ ಆಟದಲ್ಲಿ ಹೊಂದಾಣಿಕೆಯ ಕೊರತೆ ಎದ್ದುಕಂಡು ಬಂತು.