×
Ad

ರಿಯೋ ಒಲಿಂಪಿಕ್ಸ್‌ : ಶೂಟರ್ ಜಿತು ರಾಯ್ ಫೈನಲ್‌ಗೆ

Update: 2016-08-06 23:29 IST

ರಿಯೋ ಡಿ ಜನೈರೊ, ಆ.6: ಭಾರತದ ಭರವಸೆಯ ಶೂಟರ್ ಜಿತು ರಾಯ್ ರಿಯೋ ಒಲಿಂಪಿಕ್ಸ್‌ನಲ್ಲಿ ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಫೈನಲ್‌ಗೆ ತಲುಪಿದ್ದಾರೆ. ಶನಿವಾರ ಇಲ್ಲಿ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಒಟ್ಟು 580 ಅಂಕ ಗಳಿಸಿರುವ ಜಿತು ಆರನೆ ಸ್ಥಾನ ಪಡೆದರು. ಈ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟರು. ಫೈನಲ್ ಪಂದ್ಯ ಭಾರತೀಯ ಕಾಲಮಾನ ರಾತ್ರಿ 12:00ಕ್ಕೆ ಆರಂಭವಾಗಲಿದೆ. ಫೈನಲ್ ಸುತ್ತಿಗೆ ಒಟ್ಟು 8 ಶೂಟರ್‌ಗಳು ಅರ್ಹತೆ ಪಡೆದಿದ್ದಾರೆ. ಸ್ಪರ್ಧೆಯಲ್ಲಿದ್ದ ಭಾರತದ ಇನ್ನೋರ್ವ ಶೂಟರ್ ಗುರುಪ್ರೀತ್ ಸಿಂಗ್ ಅರ್ಹತಾ ಸುತ್ತಿನಲ್ಲಿ 20ನೆ ಸ್ಥಾನ ಪಡೆಯುವುದರೊಂದಿಗೆ ಸ್ಪರ್ಧೆಯಿಂದ ಹೊಬಿದ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News