ರಿಯೋ ಪ್ಯಾರಾಲಿಂಪಿಕ್ಸ್: ರಶ್ಯದ ಅಥ್ಲೀಟ್‌ಗಳಿಗೆ ನಿಷೇಧ
Update: 2016-08-07 23:18 IST
ರಿಯೋಡಿಜನೈರೊ, ಆ.7: ದೇಶದಲ್ಲಿ ಡೋಪಿಂಗ್ ಹಗರಣ ಕಂಡು ಬಂದ ಹಿನ್ನೆಲೆಯಲ್ಲಿ ಮುಂಬರುವ ರಿಯೋ ಪ್ಯಾರಾಲಿಂಪಿಕ್ಸ್‌ಗೆ ರಶ್ಯದ ಅಥ್ಲೀಟ್‌ಗಳು ಭಾಗವಹಿಸದಂತೆ ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಸಮಿತಿ(ಐಪಿಸಿ) ರವಿವಾರ ನಿಷೇಧ ಹೇರಿದೆ.
ಮೆಕ್ಲಾರೆನ್ ವರದಿಯ ಬಳಿಕ ಐಪಿಸಿ ರಶ್ಯದ ಅಥ್ಲೀಟ್‌ಗಳನ್ನು ಅಮಾನತುಗೊಳಿಸಿತ್ತು. ಇದೀಗ ನಿಷೇಧವನ್ನು ಖಚಿತಪಡಿಸಿದೆ. ರಶ್ಯದ ಪ್ಯಾರಾಲಿಂಪಿಕ್ ಸಮಿತಿ ನಿಷೇಧ ನಿರ್ಧಾರ ಪ್ರಶ್ನಿಸಿ ಕ್ರೀಡಾ ಪಂಚಾಯತಿ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದೆ.
ಪ್ಯಾರಾಲಿಂಪಿಕ್ಸ್ ಗೇಮ್ಸ್ ಇನ್ನು 31 ದಿನಗಳಲ್ಲಿ ಆರಂಭವಾಗಲಿದ್ದು, 18 ಸ್ಪರ್ಧೆಗಳಲ್ಲಿ 267 ರಶ್ಯದ ಅಥ್ಲೀಟ್‌ಗಳು ಭಾಗವಹಿಸುತ್ತಿದ್ದಾರೆ.