×
Ad

ಪುರುಷರ ಹಾಕಿ: ಭಾರತಕ್ಕೆ ಇಂದು ಜರ್ಮನಿ ಎದುರಾಳಿ

Update: 2016-08-07 23:26 IST

ರಿಯೋ ಡಿ ಜನೈರೊ, ಆ.7: ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯವನ್ನು 3-2 ಅಂತರದಿಂದ ಜಯಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ  ಸೋಮವಾರ ಇಲ್ಲಿ ನಡೆಯಲಿರುವ 2ನೆ ಗ್ರೂಪ್ ಪಂದ್ಯದಲ್ಲಿ ಹಾಲಿ ಒಲಿಂಪಿಕ್ಸ್ ಚಾಂಪಿಯಭಾರತದ ಪುರುಷರ ಹಾಕಿ ತಂಡನ್ ಜರ್ಮನಿ ವಿರುದ್ಧ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ.

ಇತ್ತೀಚೆಗೆ ನಡೆದ ಚಾಂಪಿಯನ್ಸ್ ಟೋಫಿಯಲ್ಲಿ ಜರ್ಮನಿ ವಿರುದ್ಧ ಭಾರತ ಆರಂಭದಲ್ಲಿ 3-1 ಮುನ್ನಡೆ ಸಾಧಿಸಿದ್ದರೂ ಕೊನೆಯ ಕ್ಷಣದಲ್ಲಿ ಎಸಗಿದ ತಪ್ಪಿನಿಂದಾಗಿ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತ್ತು. ಆ ಪಂದ್ಯದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿತ್ತು.

ಆದರೆ, ಜರ್ಮನಿ ಬಲಿಷ್ಠ ತಂಡವನ್ನು ಕಣಕ್ಕಿಳಿಸಿರಲಿಲ್ಲ. ಒಲಿಂಪಿಕ್ ಗೇಮ್ಸ್ ಸಂಪೂರ್ಣ ಭಿನ್ನವಾಗಿದ್ದು, ಜರ್ಮನಿ ವಿರುದ್ಧ ಜಯ ಸಾಧಿಸಬೇಕಾದರೆ 100 ಶೇ.ದಷ್ಟು ಪ್ರದರ್ಶನ ನೀಡಬೇಕು.

ಮೊದಲ ಪಂದ್ಯದಲ್ಲಿ ಭಾರತದ ಗೆಲುವಿಗೆ ನೆರವಾಗಿದ್ದ ಪೆನಾಲ್ಟಿ ್ಟಕಾರ್ನರ್ ಸ್ಪೆಷಲಿಸ್ಟ್ ರೂಪಿಂದರ್ ಪಾಲ್ ಸಿಂಗ್ ಹಾಗೂ ಡ್ರಾಗ್ ಫ್ಲಿಕರ್ ವಿಆರ್ ರಘುನಾಥ್ ಶ್ರೇಷ್ಠ ಫಾರ್ಮ್‌ನಲ್ಲಿದ್ದಾರೆ.

‘‘ನಾವು ಐರ್ಲೆಂಡ್ ವಿರುದ್ಧದ ಪಂದ್ಯವನ್ನು ವಿಡಿಯೋದಲ್ಲಿ ವೀಕ್ಷಿಸಿದ್ದು, ಆ ಪಂದ್ಯದ ತಪ್ಪನ್ನು ಗಮನಿಸಿದ್ದೇವೆ. ಶನಿವಾರ ಕೆನಡಾವನ್ನು 6-2 ಅಂತರದಿಂದ ಮಣಿಸಿದ್ದ ಜರ್ಮನಿಯನ್ನು ಎದುರಿಸಲು ನಾವು ಸಜ್ಜಾಗಿದ್ದೇವೆ’’ ಎಂದು ಭಾರತದ ಮುಖ್ಯ ಕೋಚ್ ರೊಲೆಂಟ್ ಒಲ್ಟಮನ್ಸ್ ಹೇಳಿದ್ದಾರೆ.

ಇತ್ತೀಚೆಗೆ ಸ್ಪೇನ್‌ನ ವೆಲೆನ್ಸಿಯಾದಲ್ಲಿ ನಡೆದಿದ್ದ ಆರು ರಾಷ್ಟ್ರಗಳ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಜರ್ಮನಿಯ ವಿರುದ್ಧ 0-4 ಅಂತರದಿಂದ ಸೋತಿತ್ತು.

ಭಾರತ 1996ರ ಅಟ್ಲಾಂಟ ಗೇಮ್ಸ್‌ನಲ್ಲಿ ಜರ್ಮನಿ ವಿರುದ್ಧ ಕೊನೆಯ ಬಾರಿ ಜಯ ಸಾಧಿಸಿತ್ತು. ಆ ಗೇಮ್ಸ್‌ನಲ್ಲಿ ಭಾರತ 3-0 ಅಂತರದಿಂದ ಜಯ ಗಳಿಸಿತ್ತು.

2000ರ ಸಿಡ್ನಿ ಹಾಗೂ 2004ರ ಅಥೆನ್ಸ್ ಗೇಮ್ಸ್‌ನಲ್ಲಿ ಭಾರತ ತಂಡ ಜರ್ಮನಿ ವಿರುದ್ಧ ಆಡಿರಲಿಲ್ಲ. ಆದರೆ, 2012ರ ಲಂಡನ್ ಗೇಮ್ಸ್‌ನಲ್ಲಿ 2-5 ಅಂತರದಿಂದ ಶರಣಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News