ಬ್ರಿಟನ್‌ನ ಆಡಮ್ ವಿಶ್ವ ದಾಖಲೆ
Update: 2016-08-07 23:28 IST
ರಿಯೋ ಡಿ ಜನೈರೊ, ಆ.7: ಬ್ರಿಟನ್‌ನ ಆಡಮ್ ಪೀಟಿ ರಿಯೋ ಒಲಿಂಪಿಕ್ಸ್‌ನ ಪುರುಷರ 100 ಮೀ. ಬ್ರೀಸ್ಟ್‌ಸ್ಟ್ರೋಕ್‌ನಲ್ಲಿ ಶನಿವಾರ 57.55 ನಿಮಿಷದಲ್ಲಿ ಗುರಿ ತಲುಪಿ ವಿಶ್ವ ದಾಖಲೆ ನಿರ್ಮಿಸಿದರು.
‘‘ನಾನು ಇಷ್ಟೊಂದು ವೇಗವಾಗಿ ಈಜಿರುವೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಸ್ಪರ್ಧೆಯಲ್ಲಿ ಬ್ರೆಝಿಲ್ ಸ್ಪರ್ಧಿಗಳಿಲ್ಲದಿದ್ದರೂ ಪ್ರೇಕ್ಷಕರಿಂದ ಉತ್ತಮ ಬೆಂಬಲ ವ್ಯಕ್ತಪಡಿಸಿದ್ದಾರೆ’’ ಎಂದು 2015ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೂರು ಚಿನ್ನದ ಪದಕ ಜಯಿಸಿರುವ ಆಡಮ್ ಹೇಳಿದ್ದಾರೆ.
ಪುರುಷರ 400 ಮೀ. ಫ್ರೀಸ್ಟೈಲ್‌ನಲ್ಲಿ ಚೀನಾದ ಸನ್ ಯಾಂಗ್ ಫೈನಲ್‌ಗೆ ತಲುಪಿದ್ದಾರೆ. ಹಾಲಿ ಚಾಂಪಿಯನ್ ಸನ್ 3:44.23 ನಿಮಿಷದಲ್ಲಿ ಗುರಿ ತಲುಪಿ ಫೈನಲ್‌ಗೆ ಪ್ರವೇಶಿಸಿದರು.
ಇದೇ ವೇಳೆ, ಚೀನಾದ ಲೀ ಯಿಂಗ್ ಹಾಗೂ ಚೆನ ಕ್ಸಿನಿ ಮಹಿಳೆಯರ 100 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಕ್ರಮವಾಗಿ 57.98 ಹಾಗೂ 57.17 ನಿಮಿಷದಲ್ಲಿ ಗುರಿ ತಲುಪಿ ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.