×
Ad

ಬದ್ಧ ವೈರಿ ದೇಶಗಳ ಮಹಿಳಾ ಜಿಮ್ನಾಸ್ಟ್‌ಗಳಿಂದ ಒಲಿಂಪಿಕ್ಸ್ ಸೆಲ್ಫಿ... !

Update: 2016-08-09 13:33 IST

ರಿಯೋ ಡಿ ಜನೈರೊ, ಆ.9:  ಉತ್ತರ ಮತ್ತು ದಕ್ಷಿಣ ಕೊರಿಯಾ ದೇಶಗಳು ಬದ್ಧವೈರಿಗಳಂತಿದ್ದರೂ, ಅಲ್ಲಿನ ಅಥ್ಲೀಟ್‌ಗಳ ನಡುವೆ ಅಂತಹ ಭಾವನೆ ಇಲ್ಲ ಎನ್ನುವುದಕ್ಕೆ ಉಭಯ  ದೇಶಗಳ ಮಹಿಳಾ ಜಿಮ್ನಾಸ್ಟಿಕ್‌ ಪಟುಗಳ ಸೆಲ್ಫಿ ಸಾಕ್ಷಿಯಾಗಿದೆ.
 ದಕ್ಷಿಣ ಕೊರಿಯಾದ ಲೀ ಇಯೂನ್‌ ಜು ಮತ್ತು ಉತ್ತರ ಕೊರಿಯಾದ ಹಾಂಗ್‌ ಉನ್‌ ಜಂಗ್‌  ಅಭ್ಯಾಸದ ವೇಳೆ ಸೆಲ್ಫಿ ಮೂಲಕ ಸ್ವಲ್ಪ ಹೊತ್ತು ಐಕ್ಯತೆಯನ್ನು ಪ್ರದರ್ಶಿಸಿದರು.
ಅವರು ಸ್ಪರ್ಧೆ ಆರಂಭಗೊಳ್ಳುವ ಮೊದಲು ಅಭ್ಯಾಸದ ವೇಳೆಯಲ್ಲಿ  ಜೊತೆಯಾಗಿ ಸೆಲ್ಫಿ ತೆಗೆದುಕೊಂಡಿದ್ದರು. ಎರಡೂ ದೇಶಗಳ ಕ್ರೀಡಾಪಟುಗಳ ಒಲಿಂಪಿಕ್‌ ಕ್ರೀಡಾ ಸ್ಫೂರ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
ಉಭಯ ದೇಶಗಳು  ತಾಂತ್ರಿಕವಾಗಿ ಪರಸ್ಪರ ಯುದ್ಧದಲ್ಲಿ ನಿರತವಾಗಿದೆ. ಪಿಯೊಂಗ್ ಯಾಂಗ್‌ನಲ್ಲಿ  ಇತ್ತೀಚೆಗೆ ಕ್ಷಿಪಣಿ ಉಡಾವಣೆ ಬಳಿಕ  ಉತ್ತರ ಮತ್ತು ದಕ್ಷಿಣ  ಕೊರಿಯಾಗಳ ನಡುವೆ ಸಂಬಂಧ ಇನ್ನಷ್ಟು ಹಳಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News