ಆರ್ಚರಿ: ಅತಾನುದಾಸ್ ಪ್ರಿ-ಕ್ವಾರ್ಟರ್ ಫೈನಲ್‌ಗೆ
ರಿಯೋ ಡಿ ಜನೈರೊ, ಆ.9: ಕೋಲ್ಕತಾದ ಆರ್ಚರಿ ಅತಾನು ದಾಸ್ ರಿಯೋ ಒಲಿಂಪಿಕ್ಸ್‌ನಲ್ಲಿ ಪುರುಷರ ವೈಯಕ್ತಿಕ ವಿಭಾಗದಲ್ಲಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಇಲ್ಲಿ ಮಂಗಳವಾರ ಎರಡು ಗಂಟೆಯೊಳಗೆ 2 ಪಂದ್ಯಗಳನ್ನು ಜಯಿಸಿರುವ ದಾಸ್ ಅವರು ಅಂತಿಮ-16ರ ಸುತ್ತಿಗೆ ಪ್ರವೇಶಿಸಿದರು. ಅಂತಿಮ-32ರ ಸುತ್ತಿನಲ್ಲಿ ನೇಪಾಳದ ಜೀತ್‌ಬಹದ್ದೂರ್ ಮುಕ್ತಾನ್‌ರನ್ನು 29-26, 29-24, 30-26 ಅಂಕಗಳ ಅಂತರದಿಂದ ಮಣಿಸಿದರು. ಕ್ಯೂಬಾದ ಅಡ್ರಿಯಾನ್ ಆ್ಯಂಡ್ರೆಸ್ ಪೆರೆಝ್‌ರನ್ನು 28-26, 29-26, 26-27, 27-28 ಅಂತರದಿಂದ ಸೋಲಿಸಿದರು.
ಚೊಚ್ಚಲ ಒಲಿಂಪಿಕ್ ಗೇಮ್ಸ್ ಆಡುತ್ತಿರುವ 24 ಹರೆಯದ ದಾಸ್ ಅರ್ಹತಾ ಸುತ್ತಿನಲ್ಲಿ 5ನೆ ಸ್ಥಾನ ಪಡೆಯುವುದರೊಂದಿಗೆ ಅಂತಿಮ-32ರ ತೇರ್ಗಡೆಯಾಗಿದ್ದರು. ದಾಸ್ ಆಗಸ್ಟ್ 12 ರಂದು ನಡೆಯಲಿರುವ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಲೀ ಸಿಯೂಂಗ್‌ಯೂನ್‌ರನ್ನು ಎದುರಿಸಲಿದ್ದಾರೆ.
ಚೊಚ್ಚಲ ಒಲಿಂಪಿಕ್ ಗೇಮ್ಸ್ ಆಡುತ್ತಿರುವ ದಾಸ್ ಅರ್ಹತಾ ಸುತ್ತಿನಲ್ಲಿ 5ನೆ ಸ್ಥಾನ ಪಡೆಯುವುದರೊಂದಿಗೆ ಪ್ರಧಾನ ಸುತ್ತಿಗೆ ತೇರ್ಗಡೆಯಾಗಿದ್ದರು. ದಾಸ್ ಕ್ವಾರ್ಟರ್ ಫೈನಲ್‌ನಲ್ಲಿ ಕ್ಯೂಬಾದ ಅಡ್ರಿಯಾನ್ ಆ್ಯಂಡ್ರೆಸ್ ಪೆರೆಝ್‌ರನ್ನು ಎದುರಿಸಲಿದ್ದಾರೆ.