×
Ad

21 ಒಲಿಂಪಿಕ್ಸ್ ಚಿನ್ನ ಬಾಚಿದ ಫೆಲ್ಪ್ಸ್ ಹಾಗು ಭಾರತದ ಒಲಿಂಪಿಕ್ಸ್ ನಂಟು !

Update: 2016-08-10 15:50 IST

ರಿಯೋ ಡಿ ಜನೈರೊ , ಆ. 10: ಮಂಗಳವಾರ ಮತ್ತೆ ಎರಡು ಒಲಿಂಪಿಕ್ಸ್ ಚಿನ್ನ ಬಾಚಿದ ಅಮೇರಿಕಾದ 'ಚಿನ್ನದ ಮೀನು' ಖ್ಯಾತಿಯ ಮೈಕಲ್  ಫೆಲ್ಪ್ಸ್ ಒಟ್ಟು 25 ಒಲಿಂಪಿಕ್ಸ್ ಪದಕಗಳನ್ನು ಗೆದ್ದ ಅನನ್ಯ ದಾಖಲೆ ಮಾಡಿದ್ದಾರೆ. ಇದಕ್ಕೂ ಭಾರತಕ್ಕೂ ಒಂದು ವಿಶೇಷ ನಂಟಿದೆ. ಅದೇನೆಂದರೆ, 1900ರಲ್ಲಿ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಪ್ರಾರಂಭಿಸಿದ ಬಳಿಕ ಭಾರತ ದೇಶ ಗೆದ್ದಿರುವ ಒಟ್ಟು ಒಲಿಂಪಿಕ್ಸ್ ಪದಕಗಳ ಸಂಖ್ಯೆ 26 !

ಫೆಲಿಪ್ಪ್ಸ್ ಇನ್ನೊಂದು ಪದಕ ಗೆದ್ದರೆ ಭಾರತದ ಪದಕದ ದಾಖಲೆಯನ್ನು ಸರಿಗಟ್ಟರು. ಆದರೆ ಭಾರತ ಈ ವರೆಗೆ 9 ಚಿನ್ನ ಜಯಿಸಿದೆ. ಫೆಲಿಪ್ಪ್ಸ್ ಎರಡು ಪಟ್ಟು ಜಾಸ್ತಿ ಚಿನ್ನ  ಗೆದ್ದುಕೊಂಡಿದ್ದಾರೆ.

ಮಂಗಳವಾರ ಬೆಳಗ್ಗೆ  ತನ್ನ ಅಚ್ಚುಮೆಚ್ಚಿನ 200 ಮೀಟರ್ ಬಟರ್ ಫ್ಲೈ ನಲ್ಲಿ ಚಿನ್ನ ಗೆದ್ದ ಫೆಲ್ಪ್ಸ್ ಬಳಿಕ 4x200 ಫ್ರೀ ಸ್ಟೈಲ್ ರಿಲೇಯಲ್ಲಿ ತಮ್ಮ ದೇಶದ ತಂಡವನ್ನು ಪ್ರಥಮ ಸ್ಥಾನಕ್ಕೆ ಕೊಂಡೊಯ್ದು ಮತ್ತೊಂದು ಚಿನ್ನವನ್ನು ಮಡಿಲಿಗೆ ಹಾಕಿಕೊಂಡರು. 

ಒಟ್ಟಾರೆ ಈ 31 ವರ್ಷದ ದೈತ್ಯ ಪ್ರತಿಭೆ ಈವರೆಗೆ 21 ಚಿನ್ನ , ತಲಾ ಎರಡು ಬೆಳ್ಳಿ ಹಾಗು ಕಂಚಿನ ಪದಕಗಳನ್ನು ಒಲಿಂಪಿಕ್ಸ್ ನಲ್ಲಿ ಪಡೆದು ಸರ್ವ ಶ್ರೇಷ್ಠ ಒಲಿಂಪಿಯನ್ ಆಗಿದ್ದಾರೆ.  ಅದೇ ಭಾರತ ಈವರೆಗಿನ 33 ಒಲಿಂಪಿಕ್ಸ್ ಗಳಲ್ಲಿ ಒಂಬತ್ತು ಚಿನ್ನ , ಆರು ಬೆಳ್ಳಿ ಹಾಗು ಹನ್ನೊಂದು ಕಂಚಿನ ಪದಕಗಳನ್ನು ಪಡೆದಿದೆ. ಫೆಲ್ಪ್ಸ್ ಗೆ  ಭಾರತ ಪಡೆದಿರುವ ಪದಕ  ದಾಖಲೆ ಸರಿಗಟ್ಟಲು ಇನ್ನೊಂದು ಪದಕ ಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News