ಒಲಿಂಪಿಕ್ಸ್:ಸೈನಾ ಶುಭಾರಂಭ
ರಿಯೋ ಡಿ ಜನೈರೊ, ಆ.11: ಭಾರತದ ನಂ.1 ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಒಲಿಂಪಿಕ್ಸ್‌ನಲ್ಲಿ ಇಂದು ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ.
ಒಲಿಂಪಿಕ್ಸ್‌ನ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸೈನಾ ಅವರು ಬ್ರೆಝಿಲ್‌ನ ಲೊಹಾಯ್ನಿ ವಿನ್ಸೆಂಟಿ ವಿರುದ್ಧ 21-17, 21-17 ನೇರ ಸೆಟ್‌ಗಳ ಅಂತರದಿಂದ ಜಯಿಸಿದರು.
ಸಿಂಧು ಶುಭಾರಂಭ:
ರಿಯೋ ಡಿ ಜನೈರೊ, ಆ.11: ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್ ಸ್ಪರ್ಧೆಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ಶುಭಾರಂಭ ಮಾಡಿದ್ದಾರೆ.
ಗುರುವಾರ ನಡೆದ ‘ಎಂ’ ಗುಂಪಿನ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು ಅವರು ಹಂಗೇರಿಯದ ಲೌರಾ ಸರೊಸಿ ವಿರುದ್ಧ 21-8, 21-9 ಗೇಮ್‌ಗಳ ಅಂತರದಿಂದ ಸುಲಭ ಜಯ ಸಾಧಿಸಿದರು.
ಇದೇ ವೇಳೆ ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಹಾಗೂ ಸುಮೀತ್ ರೆಡ್ಡಿ ಹಾಗೂ ಮಹಿಳೆಯರ ಡಬಲ್ಸ್‌ನಲ್ಲಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಮೊದಲ ಸುತ್ತಿನಲ್ಲಿ ಮುಗ್ಗರಿಸಿದ್ದಾರೆ. ಇಂಡೋನೇಷ್ಯಾದ ಅಹ್ಸಾನ್ ಮುಹಮ್ಮದ್ ಹಾಗೂ ಸೆಟಿಯಾವಾನ್ ಹೆಂಡ್ರಾ ವಿರುದ್ಧ 18-21, 13-21 ಗೇಮ್‌ಗಳ ಶರಣಾಗಿ ಚೊಚ್ಚಲ ಒಲಿಂಪಿಕ್ಸ್ ಕೂಟವನ್ನು ಸೋಲಿನೊಂದಿಗೆ ಆರಂಭಿಸಿದ್ದಾರೆ.
ಡಿ ಗುಂಪಿನಲ್ಲಿರುವ ಅತ್ರಿ-ರೆಡ್ಡಿ ರೌಂಡ್ ರಾಬಿನ್ ಹಂತದಲ್ಲಿ ಮೂರು ಪಂದ್ಯಗಳನ್ನು ಆಡಲಿದ್ದಾರೆ.
ಭಾರತದ ಮಹಿಳೆಯರ ಡಬಲ್ಸ್ ಜೋಡಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ‘ಎ’ ಗುಂಪಿನ ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಮಿಸಾಕಿ ಮಟ್ಸುಟೊಮೊ ಹಾಗೂ ಅಯಾಕಾ ಟಕಹಶಿ ವಿರುದ್ಧ 15-21, 10-21 ಸೆಟ್‌ಗಳ ಅಂತರದಿಂದ ಸೋತು ಕಳಪೆ ಆರಂಭ ಪಡೆದಿದ್ದಾರೆ.