×
Ad

ಮನೋಜ್ ಕುಮಾರ್ ಪ್ರಿ-ಕ್ವಾರ್ಟರ್‌ಗೆ

Update: 2016-08-11 23:55 IST

ರಿಯೋ ಡಿ ಜನೈರೊ, ಆ.11: ಭಾರತದ ಬಾಕ್ಸರ್ ಮನೋಜ್ ಕುಮಾರ್ ಬುಧವಾರ ಪ್ರಿ-ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

 64 ಕೆಜಿ ತೂಕ ವಿಭಾಗದಲ್ಲಿ ಮಾಜಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಮನೋಜ್ ಕುಮಾರ್ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಎವಲ್ಡಸ್ ಪೆಟ್ರೌಸ್ಕಾಸ್‌ರನ್ನು ವಿರುದ್ಧ ಪ್ರಯಾಸದ ಗೆಲುವು ಸಾಧಿಸಿ ಪ್ರಿ-ಕ್ವಾರ್ಟರ್‌ಫೈನಲ್‌ಗೆ ತೇರ್ಗಡೆಯಾದರು.

2-1 ಅಂತರದಿಂದ ಗೆಲುವು ಸಾಧಿಸಿರುವ ಮನೋಜ್ ರವಿವಾರ ನಡೆಯಲಿರುವ ಅಂತಿಮ-16ರ ಸುತ್ತಿನಲ್ಲಿ ಉಜ್ಬೇಕಿಸ್ತಾನದ ಫಝ್‌ಲಿದ್ದೀನ್ ಗೈಬ್ನಾಝರೊವಾರನ್ನು ಎದುರಿಸಲಿದ್ದಾರೆ. ಮನೋಜ್ ಒಲಿಂಪಿಕ್ಸ್‌ನಲ್ಲಿ ಅಂತಿಮ-16ರ ಸುತ್ತು ಪ್ರವೇಶಿಸಿರುವ ಭಾರತದ 2ನೆ ಬಾಕ್ಸರ್. ವಿಕಾಸ್ ಕ್ರಿಶನ್(75ಕೆಜಿ) ಈಗಾಗಲೇ ಪ್ರಿ-ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದಾರೆ.

ಶಿವ ಥಾಪಗೆ ಸೋಲು: ಪುರುಷರ 56 ಕೆಜಿ ವಿಭಾಗದ ಅಂತಿಮ-32ರ ಪಂದ್ಯದಲ್ಲಿ ಭಾರತದ ಬಾಕ್ಸರ್ ಶಿವ ಥಾಪ ಕ್ಯೂಬಾದ ರಾಬೆಸಿ ರೆಮಿರೆಝ್ ವಿರುದ್ಧ 3-0(27-30, 26-30, 27-30) ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News