×
Ad

ಈಜುಕೊಳದಲ್ಲಿ ಪ್ರಾಬಲ್ಯ ಮುಂದುವರಿಸಿದ ಅಮೆರಿಕ

Update: 2016-08-11 23:56 IST

ರಿಯೋ ಡಿ ಜನೈರೊ, ಆ.11: ರಿಯೋ ಒಲಿಂಪಿಕ್ಸ್‌ನ ಈಜು ಸ್ಪರ್ಧೆಯಲ್ಲಿ ಅಮೆರಿಕದ ಈಜುಪಟುಗಳು ತಮ್ಮ ಪ್ರಾಬಲ್ಯ ಮುಂದುವರಿಸಿದ್ದಾರೆ.

ಮಂಗಳವಾರ 20 ಹಾಗೂ 21ನೆ ಚಿನ್ನ ಜಯಿಸಿದ್ದ ಚಿನ್ನದ ಮೀನು ಖ್ಯಾತಿಯ ಮೈಕಲ್ ಫೆಲ್ಪ್ಸ್ ಬುಧವಾರ 200 ಮೀ. ವೈಯಕ್ತಿಕ ಮೆಡ್ಲೆ ಸ್ಪರ್ದೆಯಲ್ಲಿ ಭಾಗವಹಿಸಿದರು.

 ಹೀಟ್ಸ್‌ನಲ್ಲಿ ಮೂರನೆ ಅತ್ಯಂತ ವೇಗದ ಸಮಯದಲ್ಲಿ ಗುರಿ ತಲುಪಿದ ಫೆಲ್ಪ್ಸ್ ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದು, ಈ ವರ್ಷದ ಒಲಿಂಪಿಕ್ಸ್‌ನಲ್ಲಿ ಸತತ ನಾಲ್ಕನೆ ಚಿನ್ನದ ಪದಕ ಜಯಿಸುವ ವಿಶ್ವಾಸದಲ್ಲಿದ್ದಾರೆ.

ಮಹಿಳೆಯರ 200 ಮೀ. ಫ್ರೀಸ್ಟೈಲ್‌ನಲ್ಲಿ ಎರಡನೆ ಚಿನ್ನದ ಪದಕ ಜಯಿಸಿರುವ ಅಮೆರಿಕದ ಇನ್ನೋರ್ವ ಈಜುತಾರೆ ಕಾಟೀ ಲೆಡೆಕಿ ಅಮೆರಿಕದ 4-200 ಮೀ. ಫ್ರೀಸ್ಟೈಲ್‌ನಲ್ಲಿ ಅಲ್ಲಿಸನ್ ಸ್ಚೆಮಿಟ್ ಹಾಗೂ ಮಿಸ್ಸಿ ಫ್ರಾಂಕ್ಲಿನ್‌ರೊಂದಿಗೆ ಸ್ಪರ್ಧಿಸಲಿದ್ದಾರೆ. ಈ ಮೂವರು ಲಂಡನ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.

ಬಚಾವಾದ ಬ್ರೆಝಿಲ್: ಬ್ರೆಝಿಲ್ ಫುಟ್ಬಾಲ್ ತಂಡ ಒಲಿಂಪಿಕ್ಸ್‌ನಿಂದ ಬೇಗನೆ ಹೊರ ನಡೆಯುವ ಭೀತಿಯಿಂದ ಬಚಾವಾಗಿದೆ.

ಬುಧವಾರ ಸಾಲ್ವಡೊರ್‌ನಲ್ಲಿ ನಡೆದ ತನ್ನ ಮೂರನೆ ಪಂದ್ಯದಲ್ಲಿ ಬ್ರೆಝಿಲ್ ತಂಡ ಡೆನ್ಮಾರ್ಕ್ ತಂಡವನ್ನು 4-0 ಅಂತರದಿಂದ ಮಣಿಸಿತು.

ಭಾರೀ ಮಳೆಯಿಂದಾಗಿ ಬುಧವಾರ ನಡೆಯಬೇಕಾಗಿದ್ದ 19 ಟೆನಿಸ್ ಪಂದ್ಯಗಳು ರದ್ದಾಗಿವೆ. 11111

ರಫೆಲ್ ನಡಾಲ್ ತ್ರಿವಳಿ ಚಿನ್ನಕ್ಕೆ ಮಳೆ ಭೀತಿ

ರಿಯೋ ಡಿ ಜನೈರೊ, ಆ.11: ಬ್ರೆಝಿಲ್‌ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬುಧವಾರ ನಿಗದಿಯಾಗಿದ್ದ ಎಲ್ಲ 25 ಟೆನಿಸ್ ಪಂದ್ಯಗಳು ಬಾಧಿತಗೊಂಡವು. ಮಳೆಯಿಂದಾಗಿ ತ್ರಿವಳಿ ಚಿನ್ನ ಜಯಿಸುವ ರಫೆಲ್ ನಡಾಲ್‌ಗೆ ತೀವ್ರ ಹಿನ್ನಡೆಯಾಗಿದೆ.

ಇದೇ ವೇಳೆ, ಭಾರತದ ಸಾನಿಯಾ ಮಿರ್ಝಾ ಹಾಗೂ ರೋಹನ್ ಬೋಪಣ್ಣ ಅವರು ಸಮಂತಾ ಸ್ಟೋಸರ್ ಹಾಗೂ ಜಾನ್ ಪಿಯರ್ಸ್‌ ವಿರುದ್ಧ ಆಡಬೇಕಾಗಿದ್ದ ಮೊದಲ ಸುತ್ತಿನ ಪಂದ್ಯ ಮಳೆಗಾಹುತಿಯಾಗಿದೆ.

ನಡಾಲ್ ಈ ಬಾರಿ ಸಿಂಗಲ್ಸ್, ಪುರುಷರ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ಸ್ಪರ್ಧೆಗಳಲ್ಲಿ ಆಡುತ್ತಿದ್ದು ಮೂರು ಚಿನ್ನದ ನಿರೀಕ್ಷೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News