ಒಲಿಂಪಿಕ್ಸ್ : ಫೆಲ್ಪ್ಸ್ ದಾಖಲೆಗೆ 22ನೆ ಚಿನ್ನ
ರಿಯೋ ಡಿ ಜನೈರೊ, ಆ.12: ಕ್ರೀಡಾ ಜಗತ್ತು ಕಂಡ ಅದ್ಭುತ ಈಜುಗಾರ ಅಮೆರಿಕದ ಮೈಕಲ್ ಫೆಲ್ಪ್ಸ್ಒಲಿಂಪಿಕ್ಸ್‌ನಲ್ಲಿ 22ನೆ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಇದರೊಂದಿಗೆ ಅವರು ತನ್ನಐತಿಹಾಸಿಕ ದಾಖಲೆಯನ್ನು ಇನ್ನಷ್ಟು ಉತ್ತಮಪಡಿಸಿದ್ದಾರೆ.
ಚಿನ್ನದ ಮೀನು ಎಂದೇ ಖ್ಯಾತರಾದ ಅಮೆರಿಕದ ಈಜುಪಟು ಮೈಕೆಲ್ ಫೆಲ್ಪ್ಸ್ ಗುರುವಾರ ರಾತ್ರಿ 200 ಮೀಟರ‍್ ವೈಯಕ್ತಿಕ ಮಿಡ್ಲೆ ವಿಭಾಗದಲ್ಲಿ 1 ನಿಮಿಷ 54.66 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಐತಿಹಾಸಿಕ ಸಾಧನೆ ಮಾಡಿದರು. ನಾಲ್ಕನೆ ಚಿನ್ನದೊಂದಿಗೆ ಸತತ ನಾಲ್ಕು ಒಲಿಂಪಿಕ್ಸ್ ಕೂಟಗಳಲ್ಲಿ ಚಿನ್ನ ಜಯಿಸಿದ ದಾಖಲೆ ನಿರ್ಮಿಸಿದರು.
ಮಂಗಳವಾರ ರಾತ್ರಿ ಅವರು 200 ಮೀಟರ‍್ ಬಟರ‍್ ಫ್ಲೈ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಮತ್ತು 4x200 ಮೀ ಫ್ರೀಸ್ಟೈಲ್ ರಿಲೇಯಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಒಲಿಂಪಿಕ್ಸ್‌ನಲ್ಲಿ ದಾಖಲೆ ಬರೆದರು.
31ರ ಹರೆಯದ ಅವರು ಈ ವರೆಗೆ ಒಲಿಂಪಿಕ್ಸ್ ನಲ್ಲಿ 26 ಪದಕಗಳನ್ನು ಜಯಿಸಿದ್ದಾರೆ. ಇದೊಂದು ಸಾರ್ವಕಾಲಿಕ ಒಲಿಂಪಿಕ್ಸ್ ದಾಖಲೆಯಾಗಿದೆ. ಇದರಲ್ಲಿ ಚಿನ್ನ22, ಬೆಳ್ಳಿ 2 ಮತ್ತು ಕಂಚು 2
ಈ ಮೊದಲು 4x100 ಮೀ ಫ್ರೀಸ್ಟೈಲ್ ರಿಲೇಯಲ್ಲಿ ಫೆಲ್ಪ್ಲ್ 3;09;92 ನಿಮಿಷಗಳಲ್ಲಿ ಗುರಿ ಮುಟ್ಟಿ ಈ ಸಾಧನೆ ಮಾಡಿದ್ದರು. ಈ ವರೆಗೆ ಪಡೆದಿರುವ ಪದಕಗಳ ಸಂಖ್ಯೆಯನ್ನು 26ಕ್ಕೆ ಏರಿಸಿರುವ ಫೆಲ್ಪ್ಸ್ ಭಾರತ ಒಲಿಂಪಿಕ್ಸ್ ಕೂಟಗಳಲ್ಲಿ ಈ ವರೆಗೆ ಪಡೆದಿರುವ ಪದಕಗಳ ಸಂಖ್ಯೆಯನ್ನು ಸರಿಗಟ್ಟಿದ್ದಾರೆ. ಆದರೆ ಭಾರತ ಈ ತನಕ 9 ಚಿನ್ನ ಜಯಿಸಿತ್ತು. ಫೆಲ್ಪ್ಸ್ 22 ಚಿನ್ನ ಪಡೆದಿದ್ದಾರೆ.
,,,,,,,,,,,,,,,,,,