×
Ad

ಒಲಿಂಪಿಕ್ಸ್ ನಲ್ಲಿ ಗಮನ ಸೆಳೆದ 7 ಮಹಿಳಾ ಅಥ್ಲೀಟ್ ಗಳು

Update: 2016-08-12 12:01 IST

ರಿಯೋ ಡಿ ಜನೈರೋ,ಆ.12 : ರಿಯೋ ಒಲಿಂಪಿಕ್ಸ್ ಆರಂಭವಾಗಿ ಕೆಲವು ದಿನಗಳಾಗಿವೆ. ಹಲವು ದೇಶಗಳ ಅಥ್ಲೀಟುಗಳು ತಮ್ಮ ಅಸಾಧಾರಣ ಪ್ರತಿಭೆಗಳಿಂದ ಮಿಂಚಿದ್ದಾರೆ. ಅವರಲ್ಲಿ ಗಮನ ಸೆಳೆದಿರುವ ಏಳು ಮುಸ್ಲಿಂ ಮಹಿಳಾ ಅಥ್ಲೀಟುಗಳ ವಿವರ ಇಲ್ಲಿವೆ ಓದಿ.

ಸೌದಿ ಅರೇಬಿಯಾದ ಸಾರಾ ಅತ್ತರ್ :

23 ವರ್ಷದ ಸಾರಾ ತನ್ನ ಪದವಿ ಪಡೆದ ನಂತರತನ್ನ ಸಂಪೂರ್ಣ ಗಮನವನ್ನು ಅಥ್ಲೆಟಿಕ್ಸ್ ಗೆ ಮೀಸಲಿರಿಸಿದ್ದಾರೆ.800 ಮೀಟರ್ ದೂರವನ್ನು2 ನಿಮಿಷ 40 ಸೆಕೆಂಡುಗಳಲ್ಲಿ ಕ್ರಮಿಸುತ್ತಾರೆ ಈ ಪ್ರತಿಭಾವಂತ ಕ್ರೀಡಾಳು. 2012 ರಲ್ಲಿ ನಡೆದ ಲಂಡನ್ ಒಲಿಂಪಿಕ್ಸ್ ನಲ್ಲಿ ಈಕೆ ಭಾಗವಹಿಸಿದಾಗಸೌದಿ ಅರೇಬಿಯಾದಿಂದ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಪ್ರಥಮ ಮಹಿಳಾ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಸಂಯುಕ್ತ ಅರಬ್ ಸಂಸ್ಥಾನದ ಆಯಿಷಾ ಅಲ್ ಬಲೂಷಿ :

24 ವರ್ಷದ ಆಯಿಷಾ ವೇಟ್ ಲಿಫ್ಟಿಂಗ್ ಪಟುವಾಗಿದ್ದು ಒಲಿಂಪಿಕ್ಸ್ ನಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಏಷ್ಯನ್ ಚಾಂಪಿಯನ್ ಶಿಪ್ ನಲ್ಲೂ ಈಕೆ ತಮ್ಮ ನಿರ್ವಹಣೆಯಿಂದ ಗಮನ ಸೆಳೆದಿದ್ದರು.

ಫ್ರಾನ್ಸ್ ದೇಶದ ಜೆಸ್ಸಿಕಾ ಹೌವರಾ- ಡಿ’ಹೊಮ್ಮಿಯೆಕ್ಸ್:

ಫುಟ್ ಬಾಲ್ ಆಟಗಾರ್ತಿಯಾಗಿರುವ 28 ವರ್ಷದ ಜೆಸ್ಸಿಕಾ ಮಿಡ್ ಫೀಲ್ಡರ್ ಆಗಿದ್ದು ಪ್ಯಾರಿಸ್ ಸೈಂಟ್-ಜರ್ಮೇನ್ ತಂಡಕ್ಕೆ ಆಡುತಿದ್ದಾರೆ. ಆಕೆಯ ತಂಡ ಈ ಹಿಂದೆ ಕೂಪ್ ಡಿ ಫ್ರಾನ್ಸ್ ಫೆಮಿನೀನ್ ಪಂದ್ಯ ಗೆದ್ದಿದ್ದರೆ, ಯುಎಫ್‌ಎಫ್‌ಎ ಮಹಿಳಾ ಚಾಂಪಿಯನ್ಸ್ ಲೀಗ್ ನಲ್ಲಿ ಎರಡನೇ ಸ್ಥಾನ ಪಡೆದಿತ್ತು. ಒಲಿಂಪಿಕ್ಸ್ ನಲ್ಲಿ ಆಕೆಯ ನಿರ್ವಹಣೆಯನ್ನು ಕಾದು ನೋಡಬೇಕಿದೆ.

ಟುನಿಶಿಯಾದ ಹಬೀಬಾ ಘ್ರಿಬಿ : 

300 ಮೀ ಸ್ಟೀಪಲ್ ಚೇಸ್ ಅಥ್ಲೀಟ್ ಆಗಿರುವ ಹಬೀಬಾ 2012 ರ ಲಂಡನ್ ಒಲಿಂಪಿಕ್ಸ್ ನಲ್ಲಿ 3000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಆದರೆ ಪ್ರಥಮ ಸ್ಥಾನ ಪಡೆದಿದ್ದ ರಷ್ಯಾದ ಯೂಲಿಯಾ ಝರಿಪೋವಾ ಡ್ರಗ್ಸ್ ಸೇವಿಸಿದ್ದರೆಂಬ ಆರೋಪ ಸಾಬೀತಾದಾಗ ಒಲಿಂಪಿಕ್ಸ್ ಚಿನ್ನದ ಪದಕ ಹಬೀಬಾಗೆ ಒಲಿದು ಬಂದಿತ್ತು.

ಅಮೇರಿಕಾದ ಇಬ್ತಿಹಜ್ ಮೊಹಮ್ಮದ್ : 

ಒಲಿಂಪಿಕ್ಸ್ ನಲ್ಲಿ ಫೆನ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಈ ಪ್ರತಿಭಾವಂತೆ ಕ್ರೀಡಾಳು ತನ್ನ ಪ್ರಥಮ ಪಂದ್ಯಕ್ಕಾಗಿ ಸ್ಟೇಡಿಯಂ ಪ್ರವೇಶಿಸುವಾಗಿ ಹಿಜಬ್ ಧರಿಸಿ ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿರುವ ಪ್ರಥಮ ಅಮೇರಿಕನ್ ಅಥ್ಲೀಟ್ ಆಗಲಿದ್ದಾರೆ.

ಟರ್ಕಿಯ ಎಲಿಫ್ ಜೇಲ್ ಯೆಸಿಲಿಮರ್ಕ್ :

2012 ರ ಒಲಿಂಪಿಕ್ಸ್ ನಲ್ಲಿ ಟರ್ಕಿಯನ್ನು ಪ್ರತಿನಿಧಿಸಿದ್ದ ಪ್ರಪ್ರಥಮ ಮಹಿಳಾ ಕುಸ್ತಿಪಟುವಾಗಿದ್ದ ಜೇಲ್ ಈ ಬಾರಿಯೂ ಒಲಿಂಪಿಕ್ಸ್ ನಲ್ಲಿ ಭಾಗವಹಿ ಸುತ್ತಿದ್ದಾರೆ. ಈ ಹಿಂದೆ ಆಕೆ ವಿಶ್ವ ಕುಸ್ತಿ ಸ್ಪರ್ಧೆಯಲ್ಲಿ ಹಾಗೂ ಯುರೋಪಿಯನ್ ಕುಸ್ತಿ ಸ್ಪರ್ಧೆಯಲ್ಲಿ58 ಕೆಜಿ ವಿಭಾಗದಲ್ಲಿ ತಲಾ ಎರಡು ಬಾರಿ ಕಂಚಿನ ಪದಕ ಪಡೆದಿದ್ದಾರೆ. 2013 ರ ಮೆಡಿಟರೇನಿಯನ್ ಚಾಂಪಿಯನ್ ಶಿಪ್ ನಲ್ಲಿ ಆಕೆ ಚಿನ್ನದ ಪದಕ ಪಡೆದಿದ್ದಾರೆ.

ಇರಾನ್ ದೇಶದ ಲೀಲಾ ರಜಬಿ :

ಇರಾನ್ ದೇಶದ ಈ ಶಾಟ್ ಪುಟ್ ಪ್ರತಿಭೆ 18.18 ಮೀಟರ್ ದೂರಕ್ಕೆ ಶಾಟ್ ಪುಟ್ ಎಸೆದು ರಾಷ್ಟ್ರೀಯ ದಾಖಲೆ ತಮ್ಮದಾಗಿಸಿಕೊಂಡವರು.ಏಷ್ಯನ್ ಇಂಡೋರ್ ಗೇಮ್ಸ್ ಹಾಗೂ ಏಷ್ಯನ್ ಇಂಡೋರ್ ಚಾಂಪಿಯನ್ ಶಿಪ್ ನಲ್ಲಿ ಈಕೆ ಚಿನ್ನದ ಪದಕ ಪಡೆದಿದ್ದಾರೆ ಹಾಗೂ ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿಬೆಳ್ಳಿ ಪದಕ ಗೆದ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News