ರಿಯೋ ಗೇಮ್ಸ್ 10,000 ಮೀ. ಓಟ: ವಿಶ್ವ ದಾಖಲೆ ನಿರ್ಮಿಸಿದ ಅಯಾನಾ
Update: 2016-08-12 20:51 IST
ರಿಯೋ ಡಿ ಜನೈರೊ, ಆ.12: ಇಥಿಯೋಪಿಯದ ಅಲ್ಮಝ್ ಅಯನಾ ರಿಯೋ ಒಲಿಂಪಿಕ್ಸ್‌ನ ಮಹಿಳೆಯರ 10,000 ಮೀ. ಓಟದಲ್ಲಿ ನೂತನ ವಿಶ್ವ ದಾಖಲೆ ನಿರ್ಮಿಸುವುದರೊಂದಿಗೆ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
24ರ ಹರೆಯದ ಅಯಾನಾ 29 ನಿಮಿಷ 17.45 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಈ ಮೂಲಕ ಈ ಹಿಂದಿನ ದಾಖಲೆಯನ್ನು 14 ಸೆಕೆಂಡ್ ಅಂತರದಲ್ಲಿ ಮುರಿದರು.
ಕೀನ್ಯದ ವಿವಿಯನ್ ಚೆರಿಯೊಟ್(29:32.53 ಸೆ.) ಎರಡನೆ ಸ್ಥಾನ ಪಡೆದರು. ಹಾಲಿ ಚಾಂಪಿಯನ್ ಇಥಿಯೋಪಿಯದ ತಿರುನೆಶ್ ಡಿಬಾಬಾ ಮೂರನೆ ಸ್ಥಾನಕ್ಕೆ ತೃಪ್ತಿಪಟ್ಟರು.